ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರು ಸುರಕ್ಷತಾ ಸಲಕರಣೆ ಅಳವಡಿಸಿ

ಬೆಸ್ಕಾಂ ಅಧೀಕ್ಷಕ ಕೆ.ಎಚ್.ಗುರುಸ್ವಾಮಿ ಸಲಹೆ
Last Updated 5 ಜನವರಿ 2020, 13:58 IST
ಅಕ್ಷರ ಗಾತ್ರ

ಕೋಲಾರ: ‘ಬೆಸ್ಕಾಂ ಇಲಾಖೆಯ ಕರ್ತವ್ಯದಲ್ಲಿ ಸುರಕ್ಷತಾ ಸಲಕರಣೆಗಳನ್ನು ಉಪಯೋಗಿಸುವ ಮೂಲಕ ಸಂಭವಿಸುವ ಅವಘಡಗಳನ್ನು ನಿಯಂತ್ರಿಸಬೇಕು’ ಎಂದು ಬೆಸ್ಕಾಂ ಅಧೀಕ್ಷಕ ಕೆ.ಎಚ್.ಗುರುಸ್ವಾಮಿ ಸಲಹೆ ನೀಡಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಬೆಸ್ಕಾಂ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಿದ್ಯುತ್ ಸುರಕ್ಷತಾ ಸಪ್ತಾಹ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿ, ‘ಅಧಿಕಾರಿಗಳು, ಸಿಬ್ಬಂದು ಕರ್ತವ್ಯಕ್ಕೆ ಹಾಜರಾಗುವಾಗ ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುತ್ತಾರೆ’ ಎಂದರು.

‘ನೌಕರರು ಹರ್ತರಾಡ್, ಹೆಲ್ಮೇಟ್‌, ಸೇಪ್ಟಿ ಶೂ, ಕಟ್ಟಿಂಗ್ ಪ್ಲೇಯರ್, ಬೆಲ್ಟ್ ಅಳವಡಿಸಿಕೊಂಡು, ವಿದ್ಯುತ್ ಮಾರ್ಗ ಮುಕ್ತಗೊಳಿಸಿ ಕೆಲಸ ಮಾಡಿದರೆ ವಿದ್ಯುತ್ ಅವಘಡಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಯಾವುದೇ ಮಾರ್ಗದ ದುರಸ್ತಿ ನಡೆಸುವ ಮೊದಲು ಮುಂಜಾಗ್ರತಾ ಕ್ರಮವಹಿಸಬೇಕು’ ಎಂದು ಹೇಳಿದರು.

ಬೆಸ್ಕಾಂ ಜಾಗೃತದಳ ಪೊಲೀಸ್ ಅಧೀಕ್ಷಕ ಎ.ಕುಮಾರಸ್ವಾಮಿ ಮಾತನಾಡಿ, ‘ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಕೆಲ ವ್ಯಕ್ತಿಗಳು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದರೆ ಕ್ರಮಜೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ವಿದ್ಯುತ್ ಸಂಪರ್ಕ ಕುರಿತಂತೆ ಇಲಾಖೆಗೆ ದೂರುಗಳು ಬರುವುದು ಸಹಜ. ಅದರಲ್ಲಿಯೂ ಮಳೆಗಾಲದಲ್ಲಿ ಹೆಚ್ಚಾಗಿ ದೂರುಗಳು ಬರುತ್ತವೆ. ಆದರೆ, ನೌಕರರು ಗ್ರಾಹಕರಿಗೆ ತಡೆರಹಿತ ವಿದ್ಯುತ್ ನೀಡಬೇಕೆಂಬ ಆಶಯದಲ್ಲಿ ಆತುರದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಕೆಲಸ ಮಾಡಬಾರದು’ ಎಂದು ಎಚ್ಚರಿಸಿದರು.

‘ಜಿಲ್ಲೆಯಲ್ಲಿ ನೀರಿನ ಕೊರತೆ ಇರುವುದರಿಂದ ವಿದ್ಯುತ್ ಕಳ್ಳತನ ನಡೆಯುತ್ತಿದೆ. ಕೃಷಿ ಉದ್ದೇಶಕ್ಕೆ ವಿದ್ಯುತ್‌ಗೆ ಅನುಮತಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ನಾವು ಕಾರ್ಯಾಚರಣೆ ನಡೆಸಿದಾಗ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೇಳಿದರೆ ಅಧಿಕಾರಿಗಳೇ ಹೇಳಿದ್ದಾರೆ ಎಂದು ತಿಳಿಸುತ್ತಾರೆ, ಇದನ್ನು ಮುಂದೆ ಇದಕ್ಕೆ ಅವಕಾಶ ನೀಡಬಾರದು’ ಎಂದು ಹೇಳಿದರು.

ಕೆಇಬಿಇಎ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ವೈ.ಎಸ್.ವೆಂಕಟೇಶಪ್ಪ ಮಾತನಾಡಿ, ‘ಇಲಾಖೆಯಲ್ಲಿ ನೌಕರರ ಸುರಕ್ಷತೆ ಕುರಿತಂತೆ ಆಗಿಂದಾಗ್ಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ಹೇಳಿದರು.

ಬೆವಿಕಂ ಜಾಗೃತದಳ ನೀರಿಕ್ಷಕ ಕೆ.ಆರ್.ನರಹರಿ, ಬೆಸ್ಕಾಂ ಉಪ ಲೆಕ್ಕ ನಿಯಂತ್ರಣಾಧಿಕಾರಿ ಎ.ಷಫೀವುಲ್ಲಾ, ಕಾರ್ಯನಿರ್ವಾಹಕ ಎಂಜನಿಯರ್ ಪಿ.ಆರ್.ಅಶೋಕ್, ಎಂಜಿನಿಯರ್ ಎಸ್.ಎಸ್.ಹುಸೇನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT