ಭಾನುವಾರ, ಸೆಪ್ಟೆಂಬರ್ 19, 2021
24 °C

ಕೋಲಾರ: ಹಾಲು ಉತ್ಪಾದಕರಿಗೆ ಆಹಾರ ಕಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಕೋವಿಡ್ ಮಹಾಮಾರಿಯಿಂದ ರೈತರು ತರಕಾರಿ ಬೆಳೆದು ಸರಿಯಾದ ಬೆಳೆ ಸಿಗದೆ ತೊಂದರೆಗೀಡಾಗಿದ್ದಾರೆ. ಆದರೆ, ಹೈನುಗಾರಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಹೇಳಿದರು.

ತಾಲ್ಲೂಕಿನ ತಾಯಲೂರು ಹೋಬಳಿಯ ಕೋಗಿಲೇರಿ ಗ್ರಾಮದಲ್ಲಿ ಹಾಲು ಉತ್ಪಾದಕರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

ಒಕ್ಕೂಟದ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನಕ್ಕೆ ₹ 3 ಕೋಟಿ ಬಟವಾಡೆಯಾಗುತ್ತಿದೆ. ಒಕ್ಕೂಟ ₹ 18 ಕೋಟಿ ನಷ್ಟದಲ್ಲಿದ್ದರೂ ಉತ್ಪಾದಕರನ್ನು ಕೈಬಿಡುವುದಿಲ್ಲ ಎಂದು ತಿಳಿಸಿದರು.

ಕೊಗಿಲೇರಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಮೋಹನ್‌ ರೆಡ್ಡಿ, ಗ್ರಾ.ಪಂ. ಸದಸ್ಯ ಜಗನ್ನಾಥಶೆಟ್ಟಿ, ಸೊಣ್ಣಗೌಡ, ರಾಜಾರೆಡ್ಡಿ, ಎಂ.ಎನ್. ಹಳ್ಳಿ ಅನಂತ ಪದ್ಮನಾಭರಾವ್, ಚಂದ್ರಶೇಖರ್, ಚಲಪತಿ, ಚಂದ್ರು, ಡಾ.ಕಿರಣ್, ಶ್ರೀರಾಮ್, ಎಂ. ರವಿಕುಮಾರ್, ವೇಣು, ಶ್ರೀನಿವಾಸ್, ಚಂದ್ರಶೇಖರ್‌, ಪುರುಷೋತ್ತಮ ರೆಡ್ಡಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು