ಸೋಮವಾರ, ಆಗಸ್ಟ್ 2, 2021
26 °C

ಎಟಿಎಂಗೆ ಹಣ ತುಂಬುವಲ್ಲಿ ಮೋಸ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ನಗರದ ಕೆನರಾ ಬ್ಯಾಂಕಿನ ಕರೆನ್ಸಿ ಚೆಕ್‌ನಿಂದ ಹಣ ತೆಗೆದುಕೊಂಡು ಎಟಿಎಂಗಳಿಗೆ ತುಂಬಲು ಹೋಗಿದ್ದ ಇಬ್ಬರು ನೌಕರರು ₹ 5 ಲಕ್ಷ ವಂಚಿಸಿದ್ದಾರೆ ಎಂದು ರೂಟ್ ಲೀಡರ್ ಮಹೇಂದ್ರ ಎಂಬುವರು ಆಂಡರಸನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಏಪ್ರಿಲ್ 12ರಂದು ರಾಬರ್ಟಸನ್‌ಪೇಟೆಯ ಕೆನರಾ ಬ್ಯಾಂಕಿನ ಕರೆನ್ಸಿ ಚೆಕ್‌ನಿಂದ ₹ 5.76 ಕೋಟಿಯನ್ನು ರೈಟರ್ ಬಿಸಿನೆಟ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ನ ಮಧುಚಂದ್ರ ಮತ್ತು ಉದಯಕುಮಾರ್ ವಾಹನದಲ್ಲಿ ತುಂಬಿಕೊಂಡರು. ಅದನ್ನು ಎಲ್ಲಾ ಎಟಿಎಂಗಳಿಗೆ ತುಂಬುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಇಬ್ಬರೂ ಎಲ್ಲಾ ಎಟಿಎಂಗಳಿಗೆ ಹಣ ತುಂಬಿದ್ದಾರೆ.

ಕೊನೆಯದಾಗಿ ಕ್ಯಾಸಂಬಳ್ಳಿಯ ಎಟಿಎಂನಲ್ಲಿ ಹಣ ತುಂಬುವಾಗ ₹ 25 ಲಕ್ಷ ಜಮಾ ಮಾಡುವ ಬದಲು ಕೇವಲ ₹ 20 ಲಕ್ಷ ಜಮಾ ಮಾಡಿದ್ದಾರೆ. ಇಬ್ಬರು ಸಿಬ್ಬಂದಿ ಕಂಪನಿಗೆ ₹ 5 ಲಕ್ಷ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಂಡರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.