ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆಗಳ ಹಾವಳಿ ತಪ್ಪಿಸಿ, ಇಲ್ಲವೇ ಆನೆಲದ್ದಿ ಮಾರಲು ಒಪ್ಪಿಗೆ ನೀಡಿ: ರೈತರ ಮನವಿ!

Last Updated 4 ಅಕ್ಟೋಬರ್ 2022, 2:16 IST
ಅಕ್ಷರ ಗಾತ್ರ

ಕಾಮಸಮುದ್ರ (ಬಂಗಾರಪೇಟೆ): ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಆನೆ ಲದ್ದಿ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘಟನೆ ಭಾನುವಾರ ಆನೆ ಲದ್ದಿ ಸಮೇತವಾಗಿ ವಿಶೇಷ ಪ್ರತಿಭಟನೆ ನಡೆಸಿತು.

ಮಾರುಕಟ್ಟೆಗೆ ಬೆಳೆ ಬರುವ ಸಮಯದಲ್ಲಿ ರಾತ್ರೋರಾತ್ರಿ ಹೊಲ-ಗದ್ದೆ ಮತ್ತು ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ರೈತರ ಬೆವರು ಸುರಿಸಿ ಬೆಳೆದ ಬೆಳೆಯನ್ನು ಹಾನಿ ಮಾಡುತ್ತಿವೆ. ಗಡಿ ಭಾಗದ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದರು.

ಕಾಡಾನೆಗಳ ಹಾವಳಿ ತಡೆಯಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.

ರೈತ ಸಂಘದ ಮುಖಂಡರಾದ ನಾರಾಯಣಗೌಡ, ಪುತ್ತೇರಿ ರಾಜು, ಈಕಂಬಳ್ಳಿ ಮಂಜುನಾಥ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ನಾಗಯ್ಯ, ವಿಶ್ವ, ಮುನಿರಾಜು, ಯಲ್ಲಣ್ಣ, ಪ್ರಭಾಕರ್, ನಾಗರಾಜ್, ಗೋವಿಂದಪ್ಪ, ಮಂಜುನಾಥ್, ಗುಲ್ಲಟ್ಟಿ, ಲಕ್ಷ್ಮಣ್ , ಹನುಮಯ್ಯ,ಹಾಜರಿದ್ದರು. ನಂತರ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT