ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ | ಗುರುಭವನ ನಿರ್ಮಾಣಕ್ಕೆ ₹ 2.5 ಕೋಟಿ: ಕೊತ್ತೂರು ಜಿ.ಮಂಜುನಾಥ್

Published : 6 ಸೆಪ್ಟೆಂಬರ್ 2025, 5:25 IST
Last Updated : 6 ಸೆಪ್ಟೆಂಬರ್ 2025, 5:25 IST
ಫಾಲೋ ಮಾಡಿ
Comments
ಜಿಲ್ಲಾಧಿಕಾರಿ ಎಂ.ಆರ್‌.ರ‌ವಿ ಮಾತನಾಡಿದರು
ಜಿಲ್ಲಾಧಿಕಾರಿ ಎಂ.ಆರ್‌.ರ‌ವಿ ಮಾತನಾಡಿದರು
ಎಸ್‌ಪಿ ನಿಖಿಲ್‌ ಬಿ. ಮಾತನಾಡಿದರು
ಎಸ್‌ಪಿ ನಿಖಿಲ್‌ ಬಿ. ಮಾತನಾಡಿದರು
ಸಿ.ಎಂ.ನೀಡಲಿರುವ ₹ 50 ಕೋಟಿ ವಿಶೇಷ ಅನುದಾನದಲ್ಲಿ ₹ 35 ಕೋಟಿ ರಸ್ತೆಗೆ ಬೇಕು. ₹12.5 ಕೋಟಿ ಖರ್ಚಿನ ವಿವೇಚನೆಗೆ ನನಗೆ ಬಿಟ್ಟಿದ್ದು ದೇಗುಲ ಅಭಿವೃದ್ಧಿ ವಿವಿಧ ಕಾಮಗಾರಿಗೆ ಕೊಡುತ್ತೇನೆ
ಕೊತ್ತೂರು ಮಂಜುನಾಥ್‌ ಶಾಸಕ
ಶಿಕ್ಷಕರು ಯಾವಾಗಲೂ ಸರಿ ಇರುವುದನ್ನೇ ಮಾತನಾಡಬೇಕು. ಶಿಕ್ಷಕರು ಏನನ್ನು ಹೇಳುತ್ತಾರೋ ಅದನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. ನಿತ್ಯ ಅರ್ಧ ಗಂಟೆ ಮಕ್ಕಳಿಗೆ ನಾಗರಿಕ ವರ್ತನೆ ಹೇಳಿಕೊಡಿ
ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ವೈದ್ಯರು ಕೆಟ್ಡವರಾಗಿದ್ದರೆ ಒಂದು ವ್ಯಕ್ತಿ ಸಾಯಬಹುದು. ಒಬ್ಬ ಎಂಜಿನಿಯರ್ ಕೆಟ್ಟವರಾದರೆ ಒಂದು ‌ಕಟ್ಟಡ ಬೀಳಬಹುದು. ಆದರೆ ಒಬ್ಬ ಶಿಕ್ಷಕ ಕೆಟ್ಟವರಾದರೆ ಇಡೀ ಸಮಾಜ ಕೆಟ್ಟದಾಗುತ್ತದೆ
ಎಂ.ಆರ್.ರವಿ ಜಿಲ್ಲಾಧಿಕಾರಿ
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ
‘ನಾವು ಖಾಸಗಿ ವ್ಯವಸ್ಥೆಗೆ ಮಾರು ಹೋಗುತ್ತಿದ್ದೇವೆ. ಸರ್ಕಾರಿ ಶಾಲೆಗಳು ಏಕೆ ಮುಚ್ಚುತ್ತಿವೆ? ದಾಖಲಾತಿ ಏಕೆ ಕುಸಿಯುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕು. ಸರ್ಕಾರ ವಿವಿದ ಸೌಲಭ್ಯ ನೀಡಿದರೂ ದಾಖಲಾತಿ ಕಡಿಮೆ ಆಗುತ್ತಿದೆ. ಉತ್ತಮ ವಾತಾವರಣ ನಿರ್ಮಿಸುವ ಕೆಲಸ ನಡೆಯಬೇಕು ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹೇಳಿದರು.
ಶಿಕ್ಷಕರಿಗೆ ದಸರೆ ರಜೆ ಇಲ್ಲ
ಈ ಬಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದಸರೆ ರಜೆ ಇರುವುದಿಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು ಅದಕ್ಕೆ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಸಹಕಾರ ಕೊಡಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಮನವಿ ಮಾಡಿದರು.
ಗುರುಭವನಕ್ಕೆ ಆರೇಳು ಬಾರಿ ಭೂಮಿಪೂಜೆ
ಗುರುಭವನ ನಿರ್ಮಾಣ ‌ಮಾಡುವುದಾಗಿ ಪ್ರತಿ ಶಿಕ್ಷಕರ ದಿನಾಚರಣೆಯಲ್ಲಿ ಭರವಸೆ ನೀಡುತ್ತಿದ್ದೇವೆ. ಆರೇಳು ಬಾರಿ ‌ಶಂಕುಸ್ಥಾಪನೆ ಮಾಡಿದ್ದೇವೆ‌. ನನ್ನ ಅನುದಾನದಲ್ಲಿ ₹ 10 ಲಕ್ಷ ನೀಡಿದ್ದೇನೆ. ಸಂಸದರಾಗಿದ್ದ ಎಸ್‌.ಮುನಿಸ್ವಾಮಿ ₹ 25 ಲಕ್ಷ ನೀಡಿದ್ದರು. ಆದರೆ ‌ಸಮಸ್ಯೆಯಾಗಿ ಹಣ ಇನ್ನೂ ಬಂದಿಲ್ಲ. ಶಾಸಕ ಕೊತ್ತೂರು ಅವರ ವಿಶೇಷ ಅನುದಾನದಲ್ಲಿ ₹ 2.5 ಕೋಟಿ ಸಿಗಲಿದೆ. ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ₹ 1 ಕೋಟಿ ಇದೆ. ನನ್ನದು ಹಾಗೂ ಮುನಿಸ್ವಾಮಿ ಅನುದಾನ ಸೇರಿ ₹ 35 ಲಕ್ಷ ಆಗುತ್ತದೆ. ಮತ್ತಷ್ಟು ಅನುದಾನ ಕೊಡಲು ನಾನು ಸಿದ್ಧ. ಶಿಕ್ಷಕರು ತಮ್ಮ ಎರಡು ದಿನದ ವೇತನ ಕೊಡಿ. ಸಿಎಸ್‌ಆರ್ ಅನುದಾನದಲ್ಲಿ ಉಳಿದ ಹಣದ ವ್ಯವಸ್ಥೆ ಮಾಡೋಣ. ಎಂಎಲ್‌ಸಿಗಳಾದ ನಸೀರ್ ಅಹಮ್ಮದ್ ಡಿ.ಟಿ.ಶ್ರೀನಿವಾಸ್‌ ಅವರ ಅನುದಾನ ಬಳಸೋಣ. 2027ಕ್ಕೆ ಗುರುಭವನ ಉದ್ಘಾಟನೆ ಮಾಡೋಣ’ ಎಂದು ಎಂ.ಎಲ್‌.ಅನಿಲ್‌ ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT