ಶೇ 75ಕ್ಕೂ ಅಧಿಕ ಸವಾರರಿಂದ ಪಾಲನೆ ಕೋಲಾರ ನಗರದಲ್ಲಿ ಬಹಳ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶೇ 75ಕ್ಕೂ ಅಧಿಕ ಸವಾರರು ಹೆಲ್ಮೆಟ್ ಧರಿಸಿಯೇ ಚಲಾಯಿಸುತ್ತಿದ್ದಾರೆ. ಮಾಲೂರಿನಲ್ಲೂ ಪರವಾಗಿಲ್ಲ. ಆದರೆ ಶ್ರೀನಿವಾಸಪುರ ಮುಳಬಾಗಿಲಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪಾಲನೆ ಆಗುತ್ತಿಲ್ಲ. ಅಲ್ಲೂ ಬಿಗಿ ಕ್ರಮಕೈಗೊಂಡು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ನೋಡಿಕೊಳ್ಳುತ್ತೇವೆ. ಹೆಲ್ಮೆಟ್ ಕಡ್ಡಾಯ ಮಾಡಿರುವ ಉದ್ದೇಶ ದ್ವಿಚಕ್ರ ವಾಹನಗಳ ಅಪಘಾತದಿಂದ ಉಂಟಾಗುವ ಸಾವು ನೋವು ತಡೆಗಟ್ಟುವುದಷ್ಟೇ ಆಗಿದೆ. ದಂಡ ಪಾವತಿಸಿಕೊಂಡು ಪ್ರಗತಿ ದಾಖಲಿಸುವ ಗುರಿ ನಮ್ಮದಲ್ಲ. ಹಿಂದಿನ ವರ್ಷದಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ 284 ಸಾವುಗಳು ಸಂಭವಿಸಿದ್ದು. ಈ ವರ್ಷ 238 ಸಾವುಗಳು ಸಂಭವಿಸಿವೆ. ಹೆಲ್ಮೆಟ್ ಜಾರಿಯ ಪರಿಣಾಮ ಈ ವರ್ಷದ ಅಂತ್ಯಕ್ಕೆ ಗೊತ್ತಾಗುತ್ತದೆ.