ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ಸಕಾರಾತ್ಮಕ ಮನೋಭಾವ ಚಿಂತನೆಗಳೊಂದಿಗೆ ಸಿದ್ಧತೆ ನಡೆಸಿದರೆ ಯಾವುದೇ ಸಾಧನೆ ಮಾಡಲು ಸಾಧ್ಯ.
-ಡಿ.ದೇವರಾಜ್, ಐಪಿಎಸ್ ಅಧಿಕಾರಿ
ಐಎಎಸ್ ಐಪಿಎಸ್ ಅಧಿಕಾರಿಯಾದರೆ ಏನೇನೋ ಮಾಡಿಬಿಡಬಹುದು ಎಂಬ ಭ್ರಮೆ ಬೇಡ. ಬಹಳ ನಿರೀಕ್ಷೆ ಇಟ್ಟುಕೊಂಡು ಸಿದ್ಧತೆ ನಡೆಸಬೇಡಿ. ಯಾರೂ ರೆಡ್ ಕಾರ್ಪೆಟ್ ಹಾಕಲ್ಲ. ಭ್ರಮೆಗಳಿಂದ ಆಚೆ ಬನ್ನಿ.
-ಎಂ.ಆರ್.ರವಿ, ಜಿಲ್ಲಾಧಿಕಾರಿ
ದೇವರಾಜ್ ಅವರ ಶೈಲಿ ನೋಡಿ ಪೊಲೀಸ್ ಆಗಬೇಕು ಎಂಬ ಆಸೆ ಬಂತು. ಐಪಿಎಸ್ ಆದ ನಂತರ ದೇವರಾಜ್ ಅವರನ್ನು ಭೇಟಿ ಆಗಿದ್ದೆ. ಈಗ ಅವರ ಊರಿನಲ್ಲೇ ಎಸ್ಪಿ ಆಗಿದ್ದೇನೆ.