ಗುರುವಾರ , ಏಪ್ರಿಲ್ 15, 2021
24 °C

ತಂತ್ರಜ್ಞಾನ ಯುಗದಲ್ಲೂ ಅಜ್ಞಾನ ತಾಂಡವ: ಡಿ.ಆರ್. ರಾಜಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ಪ್ರಸ್ತುತ ಸಮಾಜದಲ್ಲಿ ತಂತ್ರಜ್ಞಾನ ಉನ್ನತಮಟ್ಟದಲ್ಲಿದ್ದರೂ ಅನರಕ್ಷತೆ, ಅಜ್ಞಾನ ಕಾಡುತ್ತಿರುವುದು ಪ್ರತಿಯೊಬ್ಬರೂ ತಲೆತಗ್ಗಿಸುವ ಸಂಗತಿಯಾಗಿದೆ ಎಂದು ಜಿಲ್ಲಾ ಸಾಕ್ಷರತಾ ಸಂಯೋಜಕ ಡಿ.ಆರ್. ರಾಜಪ್ಪ ತಿಳಿಸಿದರು.

ಪಟ್ಟಣದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಗುರುವಾರ ನಡೆದ ಕೊಳಚೆ ಮತ್ತು ನಗರದ ಸಾಕ್ಷರತಾ ಬೋಧಕರ 2ನೇ ಹಂತದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕೈಗಾರಿಕೆ ಮತ್ತು ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮಾನವ ಇಡೀ ವಿಶ್ವದಲ್ಲಿ ನಡೆಯುವ ವಿದ್ಯಮಾನಗಳನ್ನು ತನ್ನ ಅಂಗೈಯಲ್ಲಿ ನೋಡುವ ಕಾಲಘಟ್ಟದಲ್ಲಿ ಅನರಕ್ಷತೆ, ಅಜ್ಞಾನ ಕಾಣುತ್ತಿದೆ ಎಂದು ವಿಷಾದಿಸಿದರು.

ಸ್ವಯಂಸೇವಕರು ತರಬೇತಿ ನೀಡುತ್ತಿದ್ದು, ಆಯಾ ಭಾಗದ ಪುರಸಭಾ ಸದಸ್ಯರು ಸ್ವಯಂಸೇವಾ ಸಂಸ್ಥೆಗಳ ಮುಖಂಡರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪುರಸಭೆ ಸದಸ್ಯ ಮಂಜುನಾಥ್, ಸುಮಿತ್ರಾ, ಶ್ರೀಸಾಯಿ ಕೃಪಾ ಕ್ಷೇಮಾಭಿವೃದ್ಧಿ ಫೌಂಡೇಶನ್ ಸಂಸ್ಥೆಯ ಭಾಗ್ಯಮ್ಮ, ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ, ಸಂಯೋಜಕ ವೆಂಕಟಸ್ವಾಮಿ, ಪದ್ಮಾ, ಅನಿತಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು