ಕೋಮುಲ್ ಎಂ.ಡಿ ಮೋಸ ಮಾಡುತ್ತಿದ್ದಾರೆ
‘ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಒಕ್ಕೂಟದ ನಿರ್ದೇಶಕರನ್ನು ಮೋಸ ಮಾಡುತ್ತಿದ್ದಾರೆ ಎಂಬುದಕ್ಕೆ ಒಕ್ಕೂಟದ ತುರ್ತು ಸಭೆಯಲ್ಲಿದ್ದ ಕೆಲ ಅಜೆಂಡಾಗಳೇ ಸಾಕ್ಷಿ. ತುರ್ತು ಸಭೆಯಲ್ಲಿ ಕೇವಲ ಮೂರು ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಸಬೇಕು. ಆದರೆ ಇವರು ಮೂರನೇ ವಿಷಯದಲ್ಲಿ ಎಬಿಸಿಡಿ ಎಂದು 26 ವಿಷಯ ಸೇರಿಸಿದ್ದಾರೆ ಎಂದರೆ ಅವರ ಜಾಣತನಕ್ಕೆ ನಾವು ಮೆಚ್ಚಲೇಬೇಕು’ ಎಂದು ಎಸ್.ಎನ್.ನಾರಾಯಣಸ್ವಾಮಿ ಲೇವಡಿ ಮಾಡಿದರು. ‘ಕೋಮುಲ್‌ನಲ್ಲಿ ಅನೇಕ ನಿಯಮಗಳನ್ನು ಗಾಳಿಗೆ ತೂರಿ ಅನೇಕ ರೀತಿಯಲ್ಲಿ ದುಂದು ವೆಚ್ಚ ಮಾಡುವ ಪರಿಪಾಟು ಬಹಳ ವರ್ಷಗಳಿಂದ ಬಂದಿದೆ’ ಎಂದು ದೂರಿದರು.