ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌, ಹಿಂದೂ ಮಹಾಸಭಾದವರು ಹಿಟ್ಲರ್, ಮುಸಲೋನಿ ವಂಶಸ್ಥರು: ಸಿದ್ದರಾಮಯ್ಯ

Last Updated 1 ಏಪ್ರಿಲ್ 2023, 13:09 IST
ಅಕ್ಷರ ಗಾತ್ರ

ಕೋಲಾರ: ‘ಜರ್ಮನಿಯ ಹಿಟ್ಲರ್‌ ಹಾಗೂ ಇಟಲಿಯ ಮುಸಲೋನಿ ಅವರ ನಾಯಕತ್ವವನ್ನು ಒಪ್ಪಿಕೊಂಡವರು ಈಗ ದೇಶ ನಡೆಸುತ್ತಿದ್ದಾರೆ. ದೇಶದಲ್ಲಿ ಹಿಟ್ಲರ್‌ ಹಾಗೂ ಮುಸಲೋನಿ ವಂಶಸ್ಥರು ಇದ್ದರೆ ಅದು ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾದವರು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.9ರಂದು ನಡೆಯಲಿರುವ ‘ಜೈ ಭಾರತ್’ ಸಮಾವೇಶ ಆಯೋಜನೆಗೆ ನಡೆದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಸಭೆ ಅವರು ಮಾತನಾಡಿದರು.

‘ದೇಶದ ಜನರಲ್ಲಿ ಬೆದರಿಕೆ ಹುಟ್ಟಿಸಲು ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ರಾಹುಲ್‌ ಅವರಿಗೇ ಈ ರೀತಿ ಮಾಡಿದ ಮೇಲೆ ಉಳಿದವರ ವಿಚಾರದಲ್ಲಿ ಸುಮ್ಮನಿರುತ್ತಾರಾ ಎಂಬ ಭಯ, ಆತಂಕ ನಿರ್ಮಿಸಲು’ ಎಂದರು.

‘ಬಿಜೆಪಿಗೆ ಯಾವತ್ತೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಒಂದು ದೇಶ, ಒಂದು ನಾಯಕತ್ವ, ಒಂದು ಭಾಷೆ ಮೇಲೆ ನಂಬಿಕೆ ಇಟ್ಟವರು‍’ ಎಂದು ಟೀಕಿಸಿದರು.

‘ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇನಿದೆ? ಲಲಿತ್ ಮೋದಿ, ನೀರವ್‌ ಮೋದಿ ಓಡಿ ಹೋಗಿಲ್ಲವೇ? ದೇಶದ ದುಡ್ಡನ್ನು ಲೂಟಿ ಮಾಡಿದವನಿಗೆ ಏನೆಂದು ಕರೆಯಬೇಕು? ಸಾಧು, ಸಂತರು, ರಾಷ್ಟ್ರಭಕ್ತ ಎಂದು ಕರೆಯಬೇಕೇ’ ಎಂದು ‌ಪ್ರಶ್ನಿಸಿದರು. ಜನೆ ಸಂಬಂಧ ಶನಿವಾರ ನಗರ ಹೊರವಲಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT