ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ: ಸ್ವಪಕ್ಷೀಯರ ವಿರುದ್ಧ ಶಾಸಕ ಮಂಜುನಾಥ್‌ ಕಿಡಿ

Published 24 ಜನವರಿ 2024, 15:25 IST
Last Updated 24 ಜನವರಿ 2024, 15:25 IST
ಅಕ್ಷರ ಗಾತ್ರ

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಉಪವಾಸವಿದ್ದರೋ ಇಲ್ಲವೋ ಎಂಬುದನ್ನು ಯಾರಾದರೂ ನೋಡಿದ್ದಾರೆಯೇ? ಸುಮ್ಮನೇ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ ಎಂದು ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌, ಸ್ವಪಕ್ಷೀಯ ಮುಖಂಡರಿಗೆ ತಿರುಗೇಟು ನೀಡಿದರು.

ವೇಮಗಲ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಕೆಲಸವೇನು? ಏನು ಅಭಿವೃದ್ಧಿ ಮಾಡಬೇಕು? ಜನರ ಪಾಡೇನು ಎಂಬುದರ ಕಡೆ ಗಮನ ಕೊಡುವುದನ್ನು ಬಿಟ್ಟು ಅವರಿವರ ಬಗ್ಗೆ ಮಾತನಾಡಿಕೊಂಡಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿ? ತಾವು ಏನೇನು ಆಗಿದ್ದಾಗ ಏನೇನು ಕೆಲಸ ಮಾಡಿದ್ದೀರಿ ಎಂಬುದನ್ನು ತೋರಿಸಿ’ ಎಂದರು.

‘ನಾನೂ ₹ 2.5 ಕೋಟಿ ನೀಡಿ ರಾಮನ ದೇಗುಲ ನಿರ್ಮಿಸಿದ್ದೇನೆ. ಅದರಿಂದ ನಮ್ಮ ಊರಿನಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ? ಈಗ ಯಾರ ಮಾತನ್ನೂ ಯಾರೂ ಕೇಳುವುದಿಲ್ಲ. ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನೂ ಜನರೇ ನಿರ್ಧರಿಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT