ಶ್ರೀನಿವಾಸಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಸಿ ವ್ಯಾಲಿ ಎರಡನೇ ಹಂತದ ಯೋಜನೆಗೆ ಚಾಲನೆ ನೀಡಿದ್ದು, ಜಿಲ್ಲೆಯ 30 ಕೆರೆಗಳಿಗೆ ನೀರು ಹರಿಸಲಾಗಿದೆ. ಕಾಮಗಾರಿ ಮುಗಿದ್ದು, ಡಿಸೆಂಬರ್ ವೇಳೆಗೆ ಉಳಿದ ಕೆರೆಗಳಿಗೂ ನೀರು ಹರಿಸಲಾಗುತ್ತದೆ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಹೇಳಿದರು.

ತಾಲ್ಲೂಕಿನ ಶ್ಯಾಗತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ 1 ನೇ ಅಂತಸ್ತಿನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೆರೆಗಳಿಗೆ ವರ್ಷ ಪೂರ್ತಿ ನೀರು ಹರಿಸಲಾಗುತ್ತದೆ. ಈ ನೀರಿನಿಂದಾಗಿ ಅಂತರ್ಜಲ ವೃದ್ಧಿಯಾಗಿದೆ ಎಂದರು.

ಊರಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಿ, ಎಲ್ಲರೂ ಖುಷಿಯಾಗಿ ನಗುನಗುತ್ತಾ ಇರಿ. ಹೈನುಗಾರಿಕೆ, ಕುರಿ ಸಾಕಣೆ, ರೇಷ್ಮೆ, ಮೀನು ಸಾಕುವುದು ಇನ್ನೂ ಹೆಚ್ಚಾಗಬೇಕು. ಹಳ್ಳಿಗಳಿಂದ ವಲಸೆ ಹೋಗಿ ನಗರ ಪ್ರದೇಶಗಳಲ್ಲಿ ಅಂಗಡಿ ಇಟ್ಟುಕೊಳ್ಳುವುದು, ಜವಾನ್ ಕೆಲಸ ಮಾಡುವುದು, ಪಾನಿಪುರಿ ಅಂಗಡಿ, ಎಂಜಿಲು ಪ್ಲೇಟ್ ತೊಳೆಯುವುದು ಆಗಬಾರದು. ಹಳ್ಳಿಗಳಿಂದ ವಲಸೆ ಹೋಗಬಾರದು, ಸ್ಥಳೀಯ ಕಸುಬುಗಳ ಮೂಲಕ ಆರ್ಥಿಕ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಕೋಮುಲ್ ನಿರ್ದೇಶಕರಾದ ಎನ್.ಹನುಮೇಶ್, ಕೆ.ಕೆ.ಮಂಜುನಾಥರೆಡ್ಡಿ ಮಾತನಾಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ವಿ.ಸುಧಾಕರ್, ಜಿ.ಪಂ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಒಕ್ಕೂಟದ ವ್ಯವಸ್ಥಾಪಕ ಎಂ.ಪಿ.ಚೇತನ್, ಉಪವ್ಯಸ್ಥಾಪಕ ಮುನಿರಾಜು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿರ್ದೇಶಕ ಶಿವಾನಂದ ಆಚಾರ್ಯ, ವಿಸ್ತರಣಾಧಿಕಾರಿ ವಿನಾಯಕ.ಎಸ್, ಲಕ್ಷ್ಮಿಸಾಗರ ಗ್ರಾ.ಪಂ ಉಪಾಧ್ಯಕ್ಷ ಎನ್.ಹರಿಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.