ಶನಿವಾರ, ಡಿಸೆಂಬರ್ 3, 2022
21 °C

ಕೆಜಿಎಫ್‌: ಮಳೆಯಲ್ಲೇ ಸ್ಮಶಾನ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ನಗರದ ಎಲ್ಲಾ ಸ್ಮಶಾನಗಳಲ್ಲಿ ಬುಧವಾರ ಅಗಲಿದ ಕುಟುಂಬದ ಸದಸ್ಯರು ಹಾಗೂ ಪ್ರೀತಿ ಪಾತ್ರರಿಗೆ ಗೌರವ ಸಮರ್ಪಿಸುವ ಸ್ಮಶಾನ ಪೂಜೆ (ಆಲ್ ಸೋಲ್ಸ್ ಡೇ) ನಡೆಯಿತು.

ಜಡಿ ಮಳೆಯನ್ನು ಲೆಕ್ಕಿಸದೆ ಸಾವಿರಾರು ಜನರು ಪೂಜೆಯಲ್ಲಿ ಭಾಗವಹಿಸಿದ್ದರು. ಸಂಬಂಧಿಕರು ಅಗಲಿದವರಿಗೆ ಇಷ್ಟವಾದ ವಸ್ತುಗಳು, ತಿಂಡಿ, ಪಾನೀಯಗಳನ್ನು ಇಟ್ಟು ಗೌರವ ಸಲ್ಲಿಸಿದರು. ಬ್ರಿಟಿಷರು ಆಲ್ ಸೋಲ್ಸ್ ಡೇ ಆಚರಿಸುತ್ತಿದ್ದರು. ಅವರು ಚಿನ್ನದ ಗಣಿ ಆರಂಭಿಸಲು ಇಲ್ಲಿಗೆ ಬಂದ ಮೇಲೆ ಅವರ ಪದ್ಧತಿಯನ್ನು ಇಲ್ಲಿನ ಜನರು ಅನುಕರಿಸಿದರು.

ನಗರದಲ್ಲಿ ಮೊದಲು ಬ್ರಿಟಿಷರು ಸ್ಮಶಾನ ಪೂಜೆ ನಡೆಸಿದರು. ನಂತರ ಹಿಂದೂಗಳು, ಕ್ರಿಶ್ಚಿಯನ್ನರು ಅನುಕರಿಸಲು ಶುರು ಮಾಡಿಕೊಂಡರು.

ಪ್ರತಿ ವರ್ಷದ ನ. 2ರಂದು ಸ್ಮಶಾನ ಪೂಜೆ ನಡೆಯಲಿದೆ. ಅದಕ್ಕೆ ಒಂದು ದಿನ ಮುನ್ನವೇ ಸಂಬಂಧಿಕರು ಸ್ಮಶಾನಕ್ಕೆ ಬಂದು ಗೋರಿಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ ಹೋಗುವುದು ಪದ್ಧತಿ. ಚಾಂಪಿಯನ್ ರೀಫ್ಸ್, ಕೋರ ಮಂಡಲ್, ರಜೇಶ್ಕ್ಯಾಂಪ್ ಸ್ಮಶಾನಗಳಲ್ಲಿ ಹೆಚ್ಚಿನ ಜನರು ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು