ಕೋಲಾರ: ತಾಲ್ಲೂಕಿನ ಹುತ್ತೂರು ಹೋಬಳಿ ವ್ಯಾಪ್ತಿಗೆ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಆಗಿದೆ ಎಂದು ಶಾಸಕ ಹಾಗೂ ಕೋಮುಲ್ ನಿರ್ದೇಶಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ಹುತ್ತೂರು ಗ್ರಾಮದಲ್ಲಿ ಭಾನುವಾರ ನೂತನ ಡೇರಿ ಉದ್ಘಾಟನೆ ವೇಳೆ ಅವರು ಮಾತನಾಡಿದರು.

ಸುಮಾರು ₹ 25 ಕೋಟಿ ವೆಚ್ಚದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ 500 ವಿದ್ಯಾರ್ಥಿಗಳ ಸಾಮರ್ಥ್ಯದ ಈ ವಸತಿ ಶಾಲೆಯನ್ನು ಸದ್ಯದಲ್ಲೇ ನಿರ್ಮಾಣ ಮಾಡಲಾಗುವುದು. ಈ ಭಾಗದಲ್ಲಿನ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ ಎಂದರು.

ಹುತ್ತೂರು ಹೋಬಳಿಯ ಪ್ರತಿಯೊಂದು ಗ್ರಾಮದಲ್ಲಿ ಸಂಪರ್ಕ ರಸ್ತೆ ಹಾಗೂ ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕೆ ಸುಮಾರು ₹10 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

ಈ ಭಾಗದಲ್ಲಿ ಸೋಲಾರ್ ಘಟಕ ನಿರ್ಮಾಣಕ್ಕಾಗಿ ರಸ್ತೆ ಮುಚ್ಚಲು ಹೊರಟಿದ್ದರು. ಅದನ್ನು ರದ್ದು ಮಾಡಿ ಅದೇ ರಸ್ತೆ ಅಭಿವೃದ್ಧಿಗೆ ₹ 60 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಹುತ್ತೂರು ಗ್ರಾಮದಲ್ಲಿ ಡೇರಿ ಕಟ್ಟಡ ಕಟ್ಟಲು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದಿಂದ ₹ 10 ಲಕ್ಷ, ಕೋಮುಲ್ನಿಂದ ₹ 3 ಲಕ್ಷ, ಕೆಎಂಎಫ್ನಿಂದ ₹ 4.50 ಲಕ್ಷ, ಧರ್ಮಸ್ಥಳ ಸಂಘದಿಂದ ₹ 1.50 ಲಕ್ಷ ಅನುದಾನ ಬಿಡುಗಡೆ ಮಾಡಿಸಿ ಮುಂದಿನ ವರ್ಷದೊಳಗೆ ಹೊಸ ಕಟ್ಟಡ ನಿರ್ಮಾಣ ಮಾಡಿಸಲಾಗುತ್ತದೆ ಎಂದರು.

ಕೋಮುಲ್ ನಿರ್ದೇಶಕ ವಡಗೂರು ಡಿ.ವಿ ಹರೀಶ್ ಮಾತನಾಡಿ, ಗ್ರಾಮೀಣ ಜನತೆಯ ಆದಾಯದ ಮೂಲ ಹೈನುಗಾರಿಕೆಯಾಗಿದೆ. ಇವತ್ತು ಹಾಲು ಉತ್ಪಾದಕರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್, ಹುತ್ತೂರು ಡೇರಿ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಶ್ರೀಲಕ್ಷ್ಮೀ, ಕಾಂಗ್ರೆಸ್ ಮುಖಂಡರಾದ ಹರಳಕುಂಟೆ ವೆಂಕಟೇಶ್, ಮಲ್ಲಂಡಹಳ್ಳಿ ಬಾಬು, ಚಲಪತಿ, ಮಲ್ಲಂಡಹಳ್ಳಿ ಬಾಬು ನದಂಬಳ್ಳಿ ವಿಜಿಕುಮಾರ್ ತಿಮ್ಮಸಂದ್ರ ಶ್ರೀನಿವಾಸ್, ವಿಟ್ಟಪ್ಪನಹಳ್ಳಿ ಸುನಿಲ್, ಉದಯ್, ಮೋಹನ್ ಇದ್ದರು.

Quote - ಕೋಮುಲ್ನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನನ್ನನ್ನು ಸೇರಿದಂತೆ ತನಿಖೆ ನಡೆಸಿ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಡಿ.ವಿ.ಹರೀಶ್ ಕೋಮುಲ್ ನಿರ್ದೇಶಕ

Cut-off box - ಹರೀಶ್ ತವರು ಪಕ್ಷಕ್ಕೆ ಬರುವುದು ತಪ್ಪಲ್ಲ ‘ರಾಜಕೀಯ ನಿಂತ ನೀರಲ್ಲ; ಚಲಿಸುವ ಮೋಡ ಇದ್ದಂತೆ. ಹಿಂದೆ ಎಷ್ಟೋ ಜನ ಬೇರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅದೇ ರೀತಿ ಕೋಮುಲ್ ನಿರ್ದೇಶಕ ವಡಗೂರು ಹರೀಶ್ ಕೂಡ ತವರು ಮನೆಗೆ ಬರುವುದು ತಪ್ಪಲ್ಲ. ಎಲ್ಲಿ ಗೌರವ ಸಿಗುತ್ತೇ ಅಲ್ಲಿ ಇದ್ದರೆ ಸೂಕ್ತ’ ಎಂದು ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.