ಕೋಲಾರ: ಹೊರರಾಜ್ಯಗಳ ವರ್ತಕರಿಂದ ಟೊಮೆಟೊಗೆ ಬೇಡಿಕೆ ಕಡಿಮೆ ಆಗಿದ್ದು, ಟೊಮೆಟೊ ಧಾರಣೆಯಲ್ಲಿ ಭಾರಿ ಕುಸಿತ ಕಂಡಿದೆ.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಹರಾಜಿನಲ್ಲಿ 15 ಕೆ.ಜಿ ಬಾಕ್ಸ್ ಟೊಮೆಟೊ ₹ 120ರಿಂದ 150ಕ್ಕೆ ಮಾರಾಟವಾಗುತ್ತಿದೆ. ರೈತರಿಗೆ ಕೆ.ಜಿಗೆ ಸರಾಸರಿ ₹ 8 ದರ ಲಭಿಸಿದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹ 10 ಇದೆ. ಕಳೆದ ಹತ್ತು ದಿನಗಳಿಂದ ಇದೇ ದರ ಇದೆ.

ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಸದ್ಯ 6 ಸಾವಿರ ಕ್ವಿಂಟಲ್ ಅಂದರೆ 40 ಸಾವಿರ ಬಾಕ್ಸ್ ಟೊಮೆಟೊ ಆವಕವಾಗುತ್ತಿದೆ. ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರದಿಂದಲೇ ಶೇ 90ರಷ್ಟು ಟೊಮೆಟೊ ಇಲ್ಲಿಗೆ ಬರುತ್ತಿದೆ. ಶೇ 10ರಷ್ಟು ಟೊಮೆಟೊ ಮಾತ್ರ ಕೋಲಾರದ್ದು.

‘ಉತ್ತರ ಪ್ರದೇಶ, ಗುಜರಾತ್, ಒಡಿಶಾದಲ್ಲಿ ಹೆಚ್ಚು ಟೊಮೆಟೊ ಬೆಳೆಯುತ್ತಿದ್ದಾರೆ. ಅಲ್ಲೂ ದರದಲ್ಲಿ ಭಾರಿ ಕುಸಿತ ಉಂಟಾಗಿದೆ. ಅಲ್ಲಿಂದ ತಮಿಳುನಾಡಿಗೆ ಬಹಳ ಕಡಿಮೆ ದರದಲ್ಲಿ ಪೂರೈಕೆ ಆಗುತ್ತಿದೆ. ಹೀಗಾಗಿ, ಇಲ್ಲಿನ ಟೊಮೆಟೊಗೆ ಬೇಡಿಕೆ ತಗ್ಗಿದೆ. ಗುಣಮಟ್ಟವೂ ಕಡಿಮೆ ಆಗಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ ಕೋಲಾರದಿಂದ ಕೃಷ್ಣಗಿರಿ ಹಾಗೂ ಚಿತ್ತೂರಿನ ಜ್ಯೂಸ್ ಕಾರ್ಖಾನೆಯವರು ಟೊಮೆಟೊ ಖರೀದಿ ಮಾಡುತ್ತಿದ್ದಾರೆ. ಅಲ್ಲಿ 130ಕ್ಕೂ ಅಧಿಕ ಕಾರ್ಖಾನೆಗಳಿದ್ದು ಟೊಮೆಟೊದಿಂದ ವಿವಿಧ ಉತ್ಪನ್ನ ತಯಾರಿಸುತ್ತಾರೆ ಎಂದರು.

ಜಿಲ್ಲೆಯಲ್ಲಿ ರೈತರು ಸದ್ಯ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬೆಳೆ ಬೆಳೆದಿದ್ದು, ಗುಣಮಟ್ಟವೂ ಕಡಿಮೆ ಆಗಿದೆ. ಜೂನ್ನಲ್ಲಿ ಟೊಮೆಟೊ ಸುಗ್ಗಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.