ಗ್ರಾಮ ಪಂಚಾಯಿತಿಗೆ ಪಿಡಿಒ ಬಾಸ್ ‘
ಗ್ರಾಮ ಪಂಚಾಯಿತಿಗೆ ಪಿಡಿಒ ಬಾಸ್. ಸಿಬ್ಬಂದಿಯಿಂದ ಕೆಲಸ ಮಾಡಿಸುವ ಜವಾಬ್ದಾರಿ ಪಿಡಿಒಗಳ ಮೇಲಿದೆ. ಪ್ರಗತಿ ಸಾಧನೆಯಾಗಿಲ್ಲವೆಂದರೆ ಇಒಗಳನ್ನು ಹೊಣೆ ಮಾಡಲಾಗುತ್ತದೆ. ನೊಟೀಸ್‌ಗೂ ಮಣಿಯದಿದ್ದರೆ ಅಮಾನತ್ತಿಗೆ ಶಿಫಾರಸ್ಸು ಮಾಡಿ’ ಎಂದು ಡಾ.ಪ್ರವೀಣ್ ಕೆ.ಬಾಗೇವಾಡಿ ತಿಳಿಸಿದರು. ತೆರಿಗೆ ವಸೂಲಿಯಲ್ಲಿ ಗುರಿ ಸಾಧನೆ ಮಾಡಲು ಈಗಾಗಲೇ ಸೂಚಿಸಲಾಗಿದೆ. ಆದರೂ ಶ್ರೀನಿವಾಸಪುರ ಕೋಲಾರ ತಾಲ್ಲೂಕು ತೆರಿಗೆ ವಸೂಲಿಯಲ್ಲಿ ತೀರ ಹಿಂದೆ ಉಳಿದಿವೆ. ಬಾಕಿ ಇರುವ ತೆರಿಗೆ ವಸೂಲಿ ಮಾಡಿ ಪಂಚಾಯಿತಿ ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಸೂಚಿಸಿದರು.