ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆದ್ದ ಪದಕದೊಂದಿಗೆ ಕೆ.ಎಂ.ಶ್ರುತಿ
ಪ್ರಧಾನಮಂತ್ರಿ ಟೋಫಿಯೊಂದಿಗೆ ಕೆ.ಎಂ.ಶ್ರುತಿ
ಬೆಂಗಳೂರಿನಲ್ಲಿ ಬಿ.ಇ ಓದುತ್ತಿರುವ ಕೆ.ಎಂ.ಶ್ರುತಿ ಗಣರಾಜ್ಯೋತ್ಸವ ಪರೇಡ್ ಸಂಭ್ರಮದ ಅನುಭವ ಹಂಚಿಕೊಂಡ ಸಾಧಕಿ ಶಿಬಿರಕ್ಕೆ ಲೀಡ್ ಸಿಂಗರ್ ಆಗಿ ಅವಕಾಶ
ಪ್ರಧಾನಿ ಭೇಟಿಯಾಗುವ ಅವಕಾಶ ಸಿಗುತ್ತದೆ ಎಂಬ ಆಸೆಯಿಂದಲೇ ನಾನು ಎನ್‌ಸಿಸಿ ಸೇರಿದ್ದೆ. ಆ ನನ್ನ ಕನಸು ನನಸು ಮಾಡಿಕೊಳ್ಳುವುದರ ಜೊತೆಗೆ ಎಲ್ಲರಿಂದ ಮೆಚ್ಚುಗೆಯೂ ಸಿಗುತ್ತಿದೆ
ಕೆ.ಎಂ.ಶ್ರುತಿ ಕೋಲಾರ
ಎಲ್ಲರೂ ಸಾಧನೆಗೆ ಕೊಂಡಾಡುತ್ತಿದ್ದಾರೆ...
ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಶಿಬಿರಕ್ಕೆ ಮುಖ್ಯ ಗಾಯಕಿ (ಲೀಡ್ ಸಿಂಗರ್) ಆಗಿ ಶ್ರುತಿ ಅವಕಾಶ ಪಡೆದುಕೊಂಡಿದ್ದರು. ನವದೆಹಲಿಯಲ್ಲಿ ಒಂದು ತಿಂಗಳು ನಡೆದ ತರಬೇತಿ ಶಿಬಿರ ತಾಲೀಮು ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಪಿ.ಎಂ ರ‍್ಯಾಲಿ ಪರೇಡ್ ಸಾಂಸ್ಕೃತಿಕ ಕಾರ್ಯಕ್ರಮ ಡ್ರಿಲ್ ಧ್ವಜವಂದನೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಈ ಕೆಡೆಟ್‌ಗಳು ಭಾಗವಹಿಸಿದ್ದರು. ‘ರಾಜ್ಯದಲ್ಲಿ ಸುಮಾರು 80 ಸಾವಿರ ಎನ್‌ಸಿಸಿ ಕೆಡೆಟ್‌ಗಳಿದ್ದಾರೆ. ಅವರಲ್ಲಿ ಗಣರಾಜ್ಯೋತ್ಸವ ಪರೇಡ್ ಶಿಬಿರಕ್ಕೆ ಆಯ್ಕೆಯಾಗಿದ್ದು 124 ಕೆಡೆಟ್ ಮಾತ್ರ. ಅವರಲ್ಲಿ ನಾನೂ ಒಬ್ಬಳು. ಅದೊಂದು ನನ್ನ ಪಾಲಿನ ಅತ್ಯುತ್ತಮ ಕ್ಷಣ. ಅದಕ್ಕೂ ಮೊದಲು ಸುಮಾರು ಆರು ತಿಂಗಳು ಬೆಂಗಳೂರು ಸೇರಿದಂತೆ ವಿವಿಧೆಡೆ ಒಂಬತ್ತು ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದಿದ್ದೆ. ಈ ಮೊದಲು ಕಾಲೇಜಿನಲ್ಲಿ ನಾನು ಯಾರೂ ಗೊತ್ತಿರಲಿಲ್ಲ. ಈಗ ಎಲ್ಲರೂ ಸಾಧನೆಗೆ ಕೊಂಡಾಡುತ್ತಿದ್ದಾರೆ’ ಎನ್ನುತ್ತಾರೆ ಕೆ.ಎಂ.ಶ್ರುತಿ.