ಕೋಲಾರ: ಕೋಲಾರ ನಗರಸಭೆ ಜನನ ಮತ್ತು ಮರಣ ವಿಭಾಗದ ಅಧಿಕಾರಿಗಳು ವ್ಯಕ್ತಿ ಜೀವಂತವಿರುವಾಗಲೇ ಆತನ ಹೆಸರಲ್ಲಿ ಮರಣ ಪ್ರಮಾಣಪತ್ರ ಸಿದ್ಧಪಡಿಸಿರುವ ಪ್ರಕರಣ ಬಯಲಾಗಿದೆ.

ನಗರದ ಕಠಾರಿಪಾಳ್ಯದ ರವಿಕುಮಾರ್ ಎಂಬುವರ ಹೆಸರಿನಲ್ಲಿ ನೊಂದಣಿ ಆಗಿದೆ. ಆ ಡಿಜಿಟಲ್ ಪ್ರಮಾಣಪತ್ರದಲ್ಲಿ 2025ರ ಜನವರಿ 26ರಂದು ಅವರು ನಿಧನರಾಗಿದ್ದಾರೆ ಎಂದು ನಮೂದಿಸಲಾಗಿದೆ. ಮಾರ್ಚ್ 4ರಂದು ನೋಂದಣಿ ಮಾಡಲಾಗಿದೆ.

ರವಿಕುಮಾರ್ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಅವರ ಸಹೋದರ ಪ್ರಕಾಶ್ ಎಂಬುವರು ನಾಡಕಚೇರಿಗೆ ಸಲ್ಲಿಸಿದ ಅರ್ಜಿ ಪರಿಶೀಲನೆ ವೇಳೆ ಆಧಾರ್ ಸಂಖ್ಯೆ ತಾಳೆಯಿಂದ ಈ ವಿಚಾರ ಗೊತ್ತಾಗಿದೆ. ತಂತ್ರಾಂಶದಲ್ಲಿ ‘Error occurred: The person whose details are requested in not alive’ (ಸಂಬಂಧಿಸಿದ ವ್ಯಕ್ತಿ ಬದುಕಿಲ್ಲ) ಎಂಬ ಸಂದೇಶ ಬಂದಿದೆ. ಇದರಿಂದ ಗಾಬರಿಗೊಂಡ ಅವರು ಈ ಸಂಬಂಧ ಪರಿಶೀಲಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಗೆ ಮನವಿ ಪತ್ರ ನೀಡಿದ್ದಾರೆ.

ನಂತರ ಕಚೇರಿಯಲ್ಲಿ ಆಧಾರ್ ಸಂಖ್ಯೆಯನ್ನು ಇ–ಜನ್ಮ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ರವಿಕುಮಾರ್ 26–01–2025ರಂದು ಕೋಲಾರ ನಗರಸಭಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದಾರೆ ಎಂಬ ಅಂಶ ನೋಂದಣಿಯಾಗಿರುವುದು ಕಂಡುಬಂದಿದೆ. ಈ ಸಂಬಂಧ ಪೂರಕ ಮಾಹಿತಿ ಒದಗಿಸುವಂತೆ ಜುಲೈ 16ರಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯು ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಯಾವ ಉದ್ದೇಶದಿಂದ ಬದುಕಿರುವ ವ್ಯಕ್ತಿಯ ಮರಣ ಪ್ರಮಾಣಪತ್ರ ನೋಂದಣಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ನವೀನ್ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೊಂದು ಗಂಭೀರ ಲೋಪ ಪ್ರಕರಣ. ಇಂಥ ಪ್ರಮಾಣಪತ್ರ ನೋಂದಾಯಿಸುವಾಗ ಪರಿಶೀಲಿಸಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ದೊಡ್ಡ ಎಡವಟ್ಟು ನಡೆದಿದೆ’ ಎಂದು ನಗರಸಭೆ ಕೆಲ ಸದಸ್ಯರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಈ ಬಗ್ಗೆ ದೂರು ಬಂದಿದ್ದು ಮರಣ ಪ್ರಮಾಣಪತ್ರ ನೋಂದಣಿ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುವುದು. ಪ್ರಮಾಣಪತ್ರ ರದ್ದು ಮಾಡುತ್ತೇವೆ
ನವೀನ್ ಚಂದ್ರ ಪೌರಾಯುಕ್ತ ಕೋಲಾರ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.