ಕೋಲಾರ: ನಗರ ಹೊರವಲಯದ ಕೂಟೇರಿ ಬಳಿ ಶನಿವಾರ ಬೆಳಿಗ್ಗೆ ಬಸ್ ಪಲ್ಟಿಯಾಗಿ ಐವರು ಮಕ್ಕಳಿಗೆ ಸಣ್ಣಪುಟ್ಟ ಗಾಯ ಹಾಗೂ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ.
ಬೆಗ್ಲಿ ಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯ ಬಸ್ ಇದಾಗಿದೆ.
ಬಸ್ಸಿನಲ್ಲಿ ಸುಮಾರು 35 ಮಕ್ಕಳು ಇದ್ದರು ಎಂಬುದು ಗೊತ್ತಾಗಿದೆ. ಮಕ್ಕಳು ಹಾಗೂ ಗಾಯಾಳು ಚಾಲಕನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.