ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿವಾಸಪುರ: ‌ಪಟ್ಟಣದಲ್ಲಿ ಹೆಚ್ಚಿದ ಬೀದಿ ನಾಯಿ ಕಾಟ

ಶ್ರೀನಿವಾಸಪುರ: ಪುರಸಭೆ ವಿರುದ್ಧ ನಾಗರಿಕರ ಆಕ್ರೋಶ
Published : 11 ಸೆಪ್ಟೆಂಬರ್ 2024, 6:45 IST
Last Updated : 11 ಸೆಪ್ಟೆಂಬರ್ 2024, 6:45 IST
ಫಾಲೋ ಮಾಡಿ
Comments

ಶ್ರೀನಿವಾಸಪುರ: ‌ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಬಡಾವಣೆಗಳಲ್ಲಿ ನಡೆದಾಡುವುದೇ ದುಸ್ತರವಾಗಿ ಪರಿಣಮಿಸಿದ್ದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹುತೇಕ ರಸ್ತೆಗಳಲ್ಲಿ ಬೀದಿ ನಾಯಿಗಳು ಹೆಚ್ಚಿವೆ. ಹೆಜ್ಜೆ ಹೆಜ್ಜೆಗೂ ಗುರ್‌ ಎನ್ನುವ ಶ್ವಾನಗಳು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿವೆ. ಪಾದಚಾರಿಗಳು ಮತ್ತು ದ್ವಿ ಚಕ್ರ ವಾಹನಗಳ ಸವಾರರಿಗೆ ಸಂಚಾಕಾರ ತೊಂದೊಡ್ಡಿದ್ದು, ಜನ ರೋಸಿ ಹೋಗಿದ್ದಾರೆ.

ಬಡಾವಣೆಗಳಲ್ಲಿ ತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ ಇಡುತ್ತಿದ್ದು, ಈ ಸಂಬಂಧ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಕ್ರಮ ವಹಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಪಟ್ಟಣದ ರಾಜಾಜಿ ರಸ್ತೆ , ಆಜಾದ್ ರಸ್ತೆ , ಹೈದರಾಲಿ ಮೊಹಲ್ಲಾ, ಗಫರ್ ಖಾನ್ ಮೊಹಲ್ಲಾ, ಜಾಕಿರ್ ಹುಸೇನ್ ಮೊಹಲ್ಲಾ ಸೇರಿದಂತೆ ಹಲವು ಬಡಾವಣೆಗಳಲ್ಲಿ ಬೀದಿಗಳ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಕಾಟ ತಪ್ಪಿಸುವಲ್ಲಿ ಸ್ಥಳೀಯ ಪುರಸಭೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.

ಬೀದಿ ನಾಯಿಗಳ ಕಾಟದಿಂದ ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತಿವೆ. ಮಾಂಸದ ಅಂಗಡಿಗಳ ತ್ಯಾಜ್ಯಕ್ಕಾಗಿ ದಿನವಿಡೀ ಬೀದಿ ನಾಯಿಗಳು ಅಲೆದಾಡುತ್ತಿರುತ್ತವೆ. ರಾತ್ರಿಯಲ್ಲೂ ಇದೇ ಮಾಂಸದಂಗಡಿಗಳ ಮುಂದೆ ಇರುವ ನಾಯಿಗಳು ದ್ವಿಚಕ್ರ ವಾಹನ ಸವಾರರ ಮೇಲೆರಗುತ್ತಿವೆ.

ಬೆಳಿಗ್ಗೆ ವ್ಯಾಯಾಮಕ್ಕೆ ಹೋಗುವ ಮಹಿಳೆಯರು, ವೃದ್ಧರು, ಶಾಲೆಗಳು ತೆರಳುವ‌‌ ಮಕ್ಕಳಗಳ ಮೇಲೆ ನಾಯಿಗಳ ಗುಂಪಾಗಿ ದಾಳಿ ಮಾಡುತ್ತಿವೆ.

ಜಾಕಿರ್ ಹುಸೇನ್ ಮೊಹಲ್ಲಾ ಹಾಗೂ ಕೆಲ ಬಡಾವಣೆಗಳಲ್ಲಿ ನಾಯಿಗಳ ದಾಳಿಗೆ ಕುರಿ, ಮೇಕೆ ಮತ್ತು ಕೋಳಿಗಳು ಸಹ ಬಲಿಯಾಗಿವೆ.

ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ನಾಗರಿಕರು. ಶ್ರೀನಿವಾಸಪುರ ಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT