ಕೋಲಾರ: ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ಗೆ ಇಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿ.ಕೃಷ್ಣ ಮತ್ತು ಉಪಾಧ್ಯಕ್ಷರಾಗಿ ಎಂ.ಮುನಿರಾಜು ಅವಿರೋಧ ಆಯ್ಕೆಯಾದರು.

ಸೊಸೈಟಿಯ 12 ನಿರ್ದೇಶಕರ ಒಮ್ಮತ ತೀರ್ಮಾನದಂತೆ ಕೃಷ್ಣ ಮತ್ತು ಮುನಿರಾಜು ಅವರನ್ನು ಹೊರತುಪಡಿಸಿ ಇತರರು ಉಮೇದುವಾರಿಕೆ ಸಲ್ಲಿಸಲಿಲ್ಲಿ. ಹೀಗಾಗಿ ಚುನಾವಣಾಧಿಕಾರಿಯು ಈ ಇಬ್ಬರು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಕೃಷ್ಣ, ‘ಸೊಸೈಟಿ ಕಟ್ಟಿ ಬೆಳೆಸಿದ ಹಿರಿಯರ ಹಾದಿಯಲ್ಲೇ ಸಾಗಿ ಸೊಸೈಟಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುಲು ಶ್ರಮಿಸುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸೊಸೈಟಿಯಿಂದ ಸಹಾಯ ನೀಡುತ್ತೇವೆ’ ಎಂದರು.

‘ಸೊಸೈಟಿಯ ಆಡಳಿತ ಕಾರ್ಯಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ. ನಿರ್ದೇಶಕರ ಸಲಹೆ ಸೂಚನೆ ಪಡೆದು ಸೊಸೈಟಿಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತೇನೆ’ ಎಂದು ಹೇಳಿದರು.

‘ಸೊಸೈಟಿ ಬೆಳವಣಿಗೆಗೆ ದುಡಿಯುತ್ತೇನೆ. ಸೊಸೈಟಿಯ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗೆ ಒತ್ತು ಕೊಡುತ್ತೇವೆ’ ಎಂದು ಮುನಿರಾಜು ತಿಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸೂಚಕರಾಗಿ ರಾಜಣ್ಣ ಹಾಗೂ ಕೆ.ಎಂ.ಮುನಿಕೃಷ್ಣ ಅನುಮೋದಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ರವಿಚಂದ್ರನ್ ಸೂಚಕರಾಗಿ ಹಾಗೂ ಎನ್.ವೆಂಕಟೇಶ್ ಅನುಮೋದಕರಾದರು. ಸೊಸೈಟಿಯ ನಿಕಟ ಪೂರ್ವ ಅಧ್ಯಕ್ಷ ರಾಜಣ್ಣ ಮಾತನಾಡಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್, ಸೊಸೈಟಿ ನಿರ್ದೇಶಕರಾದ ದೇವೇಂದ್ರನಾಥ್, ಕೆ.ನಟರಾಜ್, ಎಸ್.ಸುರೇಶ್, ಎಸ್.ಎಂ.ನಾಗರಾಜ್, ಪುಷ್ಪಲತಾ, ಕೆ.ಬಬಿತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.