ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಬುಧವಾರ ಮತದಾನ ನಡೆಯಲಿದ್ದು, ಅಧಿಕಾರ ಚುಕ್ಕಾಣಿ ಯಾರ ತೆಕ್ಕೆಗೆ ಸೇರಲಿದೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.

ಒಟ್ಟು 18 ನಿರ್ದೇಶಕ ಕ್ಷೇತ್ರ ಒಳಗೊಂಡಿರುವ ಆಡಳಿತ ಮಂಡಳಿಗೆ ಈಗಾಗಲೇ ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 12 ಸ್ಥಾನಗಳಿಗೆ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮತದಾನ ನಡೆಯಲಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಒಟ್ಟು 29 ಅಭ್ಯರ್ಥಿಗಳ ಭವಿಷ್ಯವನ್ನು 436 ಮತದಾರರು ಬರೆಯಲಿದ್ದಾರೆ. ಸಂಜೆ ಆರು ಗಂಟೆ ಹೊತ್ತಿಗೆ ಫಲಿತಾಂಶ ಬರುವ ನಿರೀಕ್ಷೆ ಇದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಕೋಲಾರ ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಡಾ.ಮೈತ್ರಿ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ನಡೆಯಲಿದೆ.

ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಇದೇ ಪಕ್ಷದ ಬಂಡಾಯ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ನಲ್ಲಿ ಎರಡು ಬಣಗಳಾಗಿ ಗುರುತಿಸಿಕೊಂಡಿರುವ ಮುಖಂಡರು ಅಭ್ಯರ್ಥಿಗಳ ಹಿಂದೆ ನಿಂತು ಗೆಲುವಿಗೆ ಹಲವಾರು ಪ್ರಯತ್ನ ನಡೆಸಿದ್ದಾರೆ. ಬೆರಳೆಣಿಕೆ ಕ್ಷೇತ್ರಗಳಲ್ಲಿ ಜೆಡಿಎಸ್–ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದು, ಪೈಪೋಟಿವೊಡ್ಡಿದ್ದಾರೆ.

ಎರಡೂ ಜಿಲ್ಲೆಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಸ್ಥಾನ ನಿರ್ಧರಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಅತಿ ಹೆಚ್ಚು ಮತಗಳು (147) ಇವೆ. ಇದೇ ಕ್ಷೇತ್ರದಿಂದ ಮತ್ತೊಂದು ಸ್ಥಾನಕ್ಕೆ ಕೋಲಾರ ಜಿಲ್ಲೆಯಿಂದ 126 ಮತಗಳಿವೆ. ಶ್ರೀನಿವಾಸಪುರ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಕ್ಷೇತ್ರಕ್ಕೆ ಕೇವಲ ಐವರು ಮತದಾರರು ಇದ್ದಾರೆ. ಈಗಾಗಲೇ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಚಿಹ್ನೆ ವಿತರಿಸಲಾಗಿದೆ.

ಬ್ಯಾಂಕ್ನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳ ನಿರ್ದೇಶಕರ ಸ್ಥಾನವನ್ನು 48 ಮತದಾರ ಸದಸ್ಯರು ನಿರ್ಧರಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹಾಗೂ ಶಾಸಕ ಕೆ.ವೈ.ನಂಜೇಗೌಡ ಬೆಂಬಲಿಗ ಮಾಲೂರಿನ ಬಿ.ಆರ್.ಶ್ರೀನಿವಾಸ್ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ. 25 ಮತ ಪಡೆಯುವವರು ಗೆಲ್ಲಲಿದ್ದಾರೆ. ಅವರನ್ನು ಮಣಿಸಲು ಕಾಂಗ್ರೆಸ್ನ ಒಂದು ಬಣ ಭಾರಿ ಕಸರತ್ತು ನಡೆಸಿದೆ. ಮತದಾನಕ್ಕೆ ಹಿಂದಿನ ದಿನ ಲೋಕಾಯುಕ್ತ ಪೊಲೀಸರು ಗೋವಿಂದಗೌಡ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ರಾಜಕೀಯ ಚಿತ್ರಣ ಪಡೆದುಕೊಂಡಿದ್ದು, ಹಲವಾರು ಊಹಾಪೋಹಗಳು ಎದ್ದಿವೆ.

ಇನ್ನು 12 ಕ್ಷೇತ್ರಗಳಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಕೊನೆಯ ಹಂತದ ಕಸರತ್ತು ನಡೆಯುತ್ತಿದ್ದು, ಆಮಿಷಗಳ ಹೊಳೆಯೇ ಹರಿದಿರುವ ಆರೋಪ ಕೇಳಿಬಂದಿದೆ.

ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವ ಆರು ನಿರ್ದೇಶಕರಲ್ಲಿ ಐವರು ಕಾಂಗ್ರೆಸ್ನ ಎರಡು ಬಣಗಳ ಸದಸ್ಯರೇ ಆಗಿದ್ದಾರೆ. ಅವರಲ್ಲಿ ಕಾಂಗ್ರೆಸ್ ಶಾಸಕರಾದ ರೂಪಕಲಾ ಶಶಿಧರ್ (ಕೆಜಿಎಫ್), ಕೊತ್ತೂರು ಮಂಜುನಾಥ್ (ಕೋಲಾರ), ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ) ಸೇರಿದ್ದಾರೆ. ಮಾಲೂರು ಕ್ಷೇತ್ರದ ನಿರ್ದೇಶಕ ರಮೇಶ್ ಡಿ.ಎಸ್. ಶಾಸಕ ನಂಜೇಗೌಡರ ಬೆಂಬಲಿಗ. ಇನ್ನು ಮಂಚೇನಹಳ್ಳಿ ಕ್ಷೇತ್ರದ ನಿರ್ದೇಶಕ ಜೆ.ವಿ.ಹನುಮೇಗೌಡ ಅವರು ಬಿಜೆಪಿ ಬೆಂಬಲಿತರು.

ಈ ಲೆಕ್ಕಾಚಾರದಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ಗೆ ಇನ್ನು ಕೇವಲ ಐದು ನಿರ್ದೇಶಕರ ಬೆಂಬಲದ ಅಗತ್ಯವಿದೆ. ಆದರೆ, ಈ ಪಕ್ಷದಲ್ಲೇ ಒಳ ಜಗಳ ಇರುವ ಕಾರಣ ಅದರ ಸದುಪಯೋಗವನ್ನು ಜೆಡಿಎಸ್–ಬಿಜೆಪಿ ಮೈತ್ರಿಕೂಟ ಪಡೆದರೂ ಅಚ್ಚರಿ ಇಲ್ಲ. ಏಕೆಂದರೆ ಕೊನೆಯಲ್ಲಿ ಯಾರ ಕೈ ಯಾರು ಹಿಡಿಯುತ್ತಾರೆ ಎಂಬುದು ಕುತೂಹಲ. 18 ಕ್ಷೇತ್ರಗಳಲ್ಲಿ ಕನಿಷ್ಠ 10 ನಿರ್ದೇಶಕ ಸ್ಥಾನ ಗೆಲ್ಲುವವರು ಡಿಸಿಸಿ ಬ್ಯಾಂಕ್ ಅಧಿಕಾರಿದ ಚುಕ್ಕಾಣಿ ಹಿಡಿಯಬಹುದು.

ಸಕಲ ಸಿದ್ಧತೆ ಬಿಗಿ ಬಂದೋಬಸ್ತ್

ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸೂಕ್ಷ್ಮತೆ ಗಮನಿಸಿ ಹೆಚ್ಚಿನ ಭದ್ರತೆಯನ್ನು ಜಿಲ್ಲಾ ಪೊಲೀಸರಿಂದ ಕೋರಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಿದ್ದಾರೆ. 12 ನಿರ್ದೇಶಕರ ಕ್ಷೇತ್ರಗಳ ಮತದಾನಕ್ಕೆ 12 ಬೂತ್ ವ್ಯವಸ್ಥೆ ಮಾಡಲಾಗಿದೆ. 4 ಗಂಟೆವರೆಗೆ ಮತದಾನಕ್ಕೆ ಅವಕಾಶವಿದ್ದು ನಂತರ ಮತ ಎಣಿಕೆ ಆರಂಭಿಸುತ್ತೇವೆ ಡಾ.ಮೈತ್ರಿ ಚುನಾವಣಾಧಿಕಾರಿ ಡಿಸಿಸಿ ಬ್ಯಾಂಕ್

ಕಣದಲ್ಲಿರುವ ಅಭ್ಯರ್ಥಿ ಮತಕ್ಷೇತ್ರ ಮತಗಳು

* ಎಂ.ಆನಂದಕುಮಾರ್ ಕೆ.ಎಂ.ಮುನಿರಾಜ: ಕೋಲಾರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 12 ಮತಗಳು

* ವಿ.ಮಾರ್ಕಂಡೇಗೌಡ ಕೆ.ಎಸ್.ರಂಗನಾಥಾಚಾರಿ: ಬಂಗಾರಪೇಟೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 13 ಮತಗಳು

* ಆರ್.ಅಮರನಾರಾಯಣಪ್ಪ ವಿ.ರಘುಪತಿರೆಡ್ಡಿ ಎಂ.ಸಿ.ಸರ್ವಜ್ಞಗೌಡ: ಮುಳಬಾಗಿಲು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 19 ಮತಗಳು

* ಎ.ಸಿ.ನಾಗರತ್ನ ಬಿ.ಎಸ್.ಶಶಿಕುಮಾರ್ ಬಿ.ವಿ.ಸುರೇಶ್ ರೆಡ್ಡಿ: ಶ್ರೀನಿವಾಸಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 5 ಮತಗಳು

* ಚಂದ್ರಾರೆಡ್ಡಿ ಜಿ. ಎನ್.ನಾಗಿರೆಡ್ಡಿ: ಚಿಂತಾಮಣಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 15 ಮತಗಳು

* ಎ.ವಿ.ಅಕ್ಕಲರೆಡ್ಡಿ ಎಂ.ಎನ್.ಕೃಷ್ಣಮೂರ್ತಿ ಪಿ.ಎನ್.ಮುನೇಗೌಡ ಎನ್.ಮಂಜುನಾಥ್: ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 16 ಮತಗಳು

* ಕೆ.ಜೆ.ಆನಂದರೆಡ್ಡಿ ಎಚ್.ಎನ್.ಮಂಜುನಾಥ್ ರೆಡ್ಡಿ: ಗುಂಡಿಬಂಡೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 8 ಮತಗಳು

* ವೆಂಕಟರಮಣರೆಡ್ಡಿ ಕೆ.ಎನ್. ಹನುಮಂತರೆಡ್ಡಿ: ಗೌರಿಬಿದನೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 18 ಮತಗಳು

* ಭಾಸ್ಕರರೆಡ್ಡಿ ಕೆ.ವಿ. ಪಿ.ಎನ್.ಮಂಜುನಾಥರೆಡ್ಡಿ ಬಿ.ಶೇಖರ್: ಚೇಳೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 9 ಮತಗಳು

* ಎಚ್.ವಿ.ವಿನೋದ್ ಕುಮಾರ್ ಕೆ.ಶಿವಾನಂದ: ಎರಡೂ ಜಿಲ್ಲೆಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರು (ಕೋಲಾರ ಜಿಲ್ಲೆ) ಒಟ್ಟು 126 ಮತಗಳು

* ಎಚ್.ಎಸ್.ಮೋಹನರೆಡ್ಡಿ ಎಂ.ರಾಮಯ್ಯ: ಎರಡೂ ಜಿಲ್ಲೆಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರು (ಚಿಕ್ಕಬಳ್ಳಾಪುರ ಜಿಲ್ಲೆ) ಒಟ್ಟು 147 ಮತಗಳು

* ಬ್ಯಾಲಹಳ್ಳಿ ಎಂ.ಗೋವಿಂದಗೌಡ ಬಿ.ಆರ್.ಶ್ರೀನಿವಾಸ್: ಬ್ಯಾಂಕ್ನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳು ಒಟ್ಟು 48 ಮತಗಳು

ಅವಿರೋಧವಾಗಿ ಆಯ್ಕೆಯಾದವರು ಹಾಗೂ ಕ್ಷೇತ್ರ

* ಎಂ.ರೂಪಕಲಾ ಶಶಿಧರ್ (ಕೆಜಿಎಫ್ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರ)

* ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರ)

* ಕೊತ್ತೂರು ಮಂಜುನಾಥ್ -ಮುಳಬಾಗಿಲು (ಬ್ಯಾಂಕ್ನ ಕಾರ್ಯವ್ಯಾಪ್ತಿಗೆ ಬರುವ ಎರಡೂ ಜಿಲ್ಲೆಗಳ ಎಲ್ಲಾ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿಂದ ಟಿಎಪಿಸಿಎಂಎಸ್) ಚುನಾಯಿಸಲ್ಪಡುವ ನಿರ್ದೇಶಕ ಕ್ಷೇತ್ರ)

* ರಮೇಶ್ ಡಿ.ಎಸ್. (ಮಾಲೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರ)

* ಎ.ನಾಗರಾಜ (ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರ)

* ಜೆ.ವಿ.ಹನುಮೇಗೌಡ (ಮಂಚೇನಹಳ್ಳಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಚುನಾಯಿಸಲ್ಪಡುವ ನಿರ್ದೇಶಕರ ಕ್ಷೇತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.