ಕೋಲಾರ: ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿಯ ವಯೋನಿವೃತ್ತಿಗೆ ₹ 5 ಲಕ್ಷ ಸೇರಿದಂತೆ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಲ್ಲಿಸಿದ್ದ ಮನವಿಯನ್ನು ಕೋಮುಲ್ ಆಡಳಿತ ಮಂಡಳಿಯು ಸ್ಪಂದಿಸಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್, ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹಾಗೂ ಆಡಳಿತ ಮಂಡಳಿ ನಿರ್ದೇಶಕರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಸಂಘದ ಪದಾಧಿಕಾರಿಗಳು ಮಂಗಳವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಸಿಬ್ಬಂದಿಯ ವಯೋನಿವೃತ್ತಿಯ ₹ 5 ಲಕ್ಷ , ಜೊತೆಗೆ ಏಕರೂಪ ತಂತ್ರಾಂಶವನ್ನು ( ಕಾಮನ್) ಸಾಫ್ಟ್ವೇರ್ ಅಳವಡಿಸಲು ಸಿಬ್ಬಂದಿಗೆ ಪ್ರತಿ ಲೀಟರ್ಗೆ 30 ಪೈಸೆ ಬದಲಿಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ. ಅಕಾಲಿಕ ಮರಣ ಹೊಂದಿದ ಸಿಬ್ಬಂದಿಗೆ ₹ 5 ಲಕ್ಷ ಕೊಡುವುದು ಉಳಿದಂತೆ ಬೇಡಿಕೆಗಳನ್ನು ಹಂತಹಂತವಾಗಿ ಪರಿಶೀಲಿಸಿ ಕ್ರಮ ವಹಿಸಲು ಒಕ್ಕೂಟದ ಆಡಳಿತ ಮಂಡಳಿ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶ್ ಗೌಡ, ಉಪಾಧ್ಯಕ್ಷ ಮಿಂಡಹಳ್ಳಿ ಮುನಿರಾಜು, ಖಜಾಂಚಿ ವಕ್ಕಲೇರಿ ನಾಗರಾಜ್, ತಾಲೂಕು ಅಧ್ಯಕ್ಷ ತೊಂಡಾಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ತಿಮ್ಮೇಗೌಡ, ಉಪಾಧ್ಯಕ್ಷ ಗಂಗಾಪುರ ಬಾಬು ಪದಾಧಿಕಾರಿಗಳಾದ, ಮದನಹಳ್ಳಿ ರಮೇಶ್, ಪುರಹಳ್ಳಿ ದೇವರಾಜ್, ತೊಕಲಘಟ್ಟ ರವಿ, ಶ್ರೀರಂಗಪುರ ರವಿ, ಕೋಗಿಲೇರಿ ಸುಬ್ರಮಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.