ಕೋಲಾರ: ‘ಬಿಜೆಪಿಯು ಮಾಜಿ ಶಾಸಕ ಎಚ್.ವಿಶ್ವನಾಥ್ ಅವರನ್ನು ನಡು ನೀರಿನಲ್ಲಿ ಕೈಬಿಟ್ಟಿದೆ. ಬಿಜೆಪಿಯನ್ನು ನಂಬಿ ಹೋದ ವಿಶ್ವನಾಥ್ ಅವರದು ಈಗ ತ್ರಿಶಂಕು ಸ್ಥಿತಿ’ ಎಂದು ಶಾಸಕ ಕೃಷ್ಣ ಬೈರೇಗೌಡ ಲೇವಡಿ ಮಾಡಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯ ಮಟ್ಟದ ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದ ವಿಶ್ವನಾಥ್ ಅವರನ್ನು ಬಿಜೆಪಿ ಮುಖಂಡರು ಆಪರೇಷನ್ ಕಮಲದ ಹೆಸರಿನಲ್ಲಿ ಎಲ್ಲಿಯೂ ಸಲ್ಲದಂತೆ ಮಾಡಿದ್ದಾರೆ. ಬಿಜೆಪಿ ನಂಬಿ ಹೋದರೆ ರಾಜಕೀಯವಾಗಿ ಅತಂತ್ರರಾಗುತ್ತಾರೆ ಎಂಬುದಕ್ಕೆ ವಿಶ್ವನಾಥ್ ಅವರು ತಾಜಾ ಉದಾಹರಣೆ’ ಎಂದು ಟೀಕಿಸಿದರು.

ಇದನ್ನೂ ಓದಿ:ವಿಶ್ವನಾಥ್ರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ: ಎಸ್.ಟಿ.ಸೋಮಶೇಖರ ಹೇಳಿಕೆ

‘ವಿಶ್ವನಾಥ್‌ರ ಕುತಂತ್ರದಿಂದಲೇ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತು. ಅದಕ್ಕೂ ಮುನ್ನ ವಿಶ್ವನಾಥ್ ಅವರಿಗೆ ಹಲವು ಭರವಸೆ ನೀಡಿ ನಂಬಿಸಿದ್ದ ಬಿಜೆಪಿ ಮುಖಂಡರು ಈಗ ಅವರನ್ನು ಬಲಿಪಶು ಮಾಡಿದ್ದಾರೆ. ಬಿಜೆಪಿ ಮುಖಂಡರ ಅಧಿಕಾರದ ದಾಹಕ್ಕೆ ವಿಶ್ವನಾಥ್ ದಾಳವಾದರು. ಬಿಜೆಪಿ ಅಧಿಕಾರಕ್ಕಾಗಿ ಅವರನ್ನು ಬಳಸಿಕೊಂಡು ಬಿಸಾಡಿದೆ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.