ವಾರ್ಡ್‌ನಲ್ಲಿ ಸುಮಾರು 700 ಮನೆಗಳಿವೆ. ಆದರೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಪುರಸಭೆ ಸ್ವಚ್ಛತಾ ಕೆಲಸ ಮಾಡುತ್ತಿಲ್ಲ. ಇದರಿಂದ ನಗರದಲ್ಲೆಲ್ಲಾ ಕಸದ ರಾಶಿ ತುಂಬಿಕೊಂಡಿದ್ದು ಸೊಳ್ಳೆ ಮತ್ತು ನೊಣಗಳ ಆವಾಸ ಸ್ಥಾನವಾಗಿದೆ
ಚಂದ್ರಪ್ಪ ರಾಜೀವ ನಗರ ನಿವಾಸಿ
ರಾಜೀವ್ ನಗರವು ಮಾಲೂರಿನಿಂದ ಮುಕ್ಕಾಲು ಕಿ.ಮೀ ದೂರದಲ್ಲಿದೆ. ಆದರೆ ಇಲ್ಲಿ ಸರ್ಕಾರಿ ಶಾಲೆಯೇ ಇಲ್ಲ. ಪ್ರತಿದಿನ ಸುಮಾರು 150 ಮಕ್ಕಳು ಮಾಲೂರಿನಲ್ಲಿರುವ ಸರ್ಕಾರಿ ಶಾಲೆಯನ್ನೇ ನೆಚ್ಚಿಕೊಂಡಿದ್ದಾರೆ
ಅರುಣ್ ರಾಜೀವ ನಗರದ ನಿವಾಸಿ
ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಕರ್ಯಗಳು ಮರೀಚಿಕೆಯಾಗಿವೆ. ಖಾಸಗಿ ವಾಹನಗಳಲ್ಲಿ ಬರುವ ನೀರನ್ನು ಖರೀದಿಸಿ ಕುಡಿಯಬೇಕಿದೆ. ಮನೆಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು ಹಾವುಗಳ ಕಾಟ ಹೆಚ್ಚಿದೆ
ಪಾರ್ವತಮ್ಮ ರಾಜೀವ ನಗರ ನಿವಾಸಿ
ಪುರಸಭೆ ವತಿಯಿಂದ 2016–17ರಲ್ಲಿ ₹6.50 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವೇ ಆಗಿಲ್ಲ. ಈಗ ಶೌಚಾಲಯ ಕಟ್ಟಡ ಶಿಥಿವಾಗುತ್ತಿದೆ