ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಕಲ್‌ನಲ್ಲಿ ಶಾಂತಿಯುತ ಮತದಾನ

Published 26 ಏಪ್ರಿಲ್ 2024, 13:37 IST
Last Updated 26 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ಟೇಕಲ್: ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತಗಟ್ಟೆಗೆ ಉತ್ಸಾಹದಿಂದ ಬಂದು ಮತ ಚಲಾಯಿಸಿದರು. ಕೆಲವೆಡೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬಿಸಿಲಿನ ತಾಪಮಾನದಿಂದ ಹೆಚ್ಚಿರುವ ಕಡೆಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಹೋಬಳಿಯಲ್ಲಿ ಶೇ 50ರಷ್ಟು ಮತದಾನ ಆಗಿರುವುದಾಗಿ ಮೂಲಗಳು ತಿಳಿಸಿವೆ. 

ಟೇಕಲ್ ಹೋಬಳಿಯ ಬನಹಳ್ಳಿ, ಮಾಕಾರಹಳ್ಳಿ, ನೆಲ್ಲಹಳ್ಳಿ, ಯಲುವಗುಳಿ, ಹುಣಸಿಕೋಟೆ, ಕೊಂಡಶೆಟ್ಟಹಳ್ಳಿ, ಪನಮಾಕನಹಳ್ಳಿ ಹಾಗೂ ಕೆ.ಜಿ.ಹಳ್ಳಿ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರು ಮತದಾನ ಮಾಡಿದರು.

ಕೈಕೊಟ್ಟ ಮತಯಂತ್ರ: ರಿಪೇರಿ ಟೇಕಲ್ ಹೋಬಳಿಯ ಪನಮಾಕನಹಳ್ಳಿಯ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೆಟ್ಟು ಹೋಗಿದ್ದರಿಂದ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತಯಂತ್ರ ಸರಿಪಡಿಸಿದರು. ಬಳಿಕ  ಮತದಾನ ಸುಸೂತ್ರವಾಗಿ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT