ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಸಂಭ್ರಮ, ಸಡಗರದ ಪೊಂಗಲ್‌

Published 15 ಜನವರಿ 2024, 14:23 IST
Last Updated 15 ಜನವರಿ 2024, 14:23 IST
ಅಕ್ಷರ ಗಾತ್ರ

ಕೆಜಿಎಫ್‌: ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಮತ್ತು ನಗರಭಾಗದಲ್ಲಿ ಪೊಂಗಲ್ ಹಬ್ಬವನ್ನು ಸೋಮವಾರ ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆ ಮಾಡಲಾಯಿತು.

ನಗರದಲ್ಲೆಡೆ ಹಬ್ಬದ ಸಂಭ್ರಮ ಎದ್ದುಕಾಣುತ್ತಿತ್ತು. ಮನೆಯ ಮುಂಭಾಗದಲ್ಲಿ ಚಿತ್ತ ಸೆಳೆಯುವ ರಂಗೋಲಿಗಳನ್ನು ಬಿಡಿಸಲಾಗಿತ್ತು. ಬಹುತೇಕ ರಂಗೋಲಿಗಳಲ್ಲಿ ಮಡಿಕೆ ಮತ್ತು ಕಬ್ಬಿನ ಚಿತ್ರಗಳು ಇದ್ದವು. ಗಂಡಸರು ಸಾಂಪ್ರದಾಯಿಕ ಪಂಚೆ ಮತ್ತು ಅಂಗಿಯನ್ನು ತೊಟ್ಟಿದ್ದರೆ, ಮಹಿಳೆಯರು ಹೊಸ ಸೀರೆಗಳಲ್ಲಿ ಹಬ್ಬದಲ್ಲಿ ತೊಡಗಿದ್ದರು. ಎಲ್ಲೆಡೆ ಪರಸ್ಪರ ಪೊಂಗಲ್‌ ಹಬ್ಬದ ಶುಭಾಶಯ ವಿನಿಮಯ ನಡೆಯುತ್ತಿದ್ದ ದೃಶ್ಯ ಕಂಡು ಬಂದಿತು.

ಕೆಎನ್‌ಜೆಎಎಸ್ ಬ್ಲಾಕ್‌ ಮತ್ತು ಸಂಜಯಗಾಂಧಿ ನಗರದಲ್ಲಿ ಸಾಂಕೇತಿಕವಾಗಿ ಪೊಂಗಲ್ ತಯಾರು ಮಾಡುವ ಕಾರ್ಯಕ್ರಮ ನಡೆಯಿತು. 

ಕೆಎನ್‌ಜೆಎಎಸ್‌ ಬ್ಲಾಕ್‌ನಲ್ಲಿ ಮೊದಲಿನಿಂದಲೂ ಪೊಂಗಲ್‌ ಹಬ್ಬದಂದು ಎತ್ತುಗಳ ಓಟವನ್ನು ನಡೆಸಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ ಎತ್ತಿನ ಕೊಂಬು ತಿವಿದು ಪ್ರೇಕ್ಷಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಎತ್ತುಗಳ ಓಟಕ್ಕೆ ಪೊಲೀಸರು ಅನುಮತಿ ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೋನಿಯ ರಸ್ತೆಗಳ ಎರಡೂ ಬದಿಗಳಲ್ಲಿ ಕಬ್ಬಿನ ಜಲ್ಲೆಗಳನ್ನು ಇಟ್ಟು ಇಡೀ ಬಡಾವಣೆಯನ್ನು ಸಿಂಗಾರ ಮಾಡಲಾಗಿತ್ತು. ಇದೇ ರೀತಿ ಹಲವಾರು ಮೈನಿಂಗ್‌ ಕಾಲೋನಿಗಳಲ್ಲಿ ಸಹ ಹಬ್ಬ ಸಂಭ್ರಮದಿಂದ ನಡೆಯಿತು. ಕೆಲವು ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ನಾಯಕರು ಮಹಿಳೆಯರಿಗೆ ಉಡುಗೊರೆಗಳನ್ನು ನೀಡಿದರು.

ಗ್ರಾಮೀಣ ಭಾಗದಲ್ಲಿ ಹಸುಗಳಿಗೆ ಸಿಂಗಾರ ಮಾಡುವ ಪ್ರಕ್ರಿಯೆ ನಡೆಯಿತು. ಹಲವಾರು ಭಾಗಗಳಲ್ಲಿ ಆಯ್ದ ದಿನದಂದು ಹಸುಗಳಿಗೆ ಸಿಂಗಾರ ಮಾಡಿ ಮೆರವಣಿಗೆ ಮಾಡುವುದು ಪದ್ಧತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT