ಮಾಲೂರು: ಕಾದು ಕೆಂಡವಾಗಿದ್ದ ಭೂಮಿಗೆ ಶುಕ್ರವಾರ ಮದ್ಯಾಹ್ನ ಸುರಿದ ಮಳೆ ತಂಪೆರೆದಿದೆ. ಕಳೆದ ಮೂರು ದಿನಗಳಿಂದ ಮಧ್ಯಾಹ್ನದಿಂದಲೇ ಮಳೆ ಬರುವ ವಾತಾವರಣ ಇದ್ದರೂ ಸಹ ಮಳೆ ಬಾರದೇ ಮೋಡಗಳು ಚದುರಿ ಹೋಗುತ್ತಿತ್ತು.

ಆದರೆ ಇಂದು ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ಮಳೆ ಆಗಮಿಸಿತು. ಮಳೆಯು ಜೋರಾಗಿ ಬಾರದೇ ಇದ್ದರೂ ಸಾಧಾರಣವಾಗಿ ಸುಮಾರು 30 ನಿಮಿಷ ಕಾಲ ಮಳೆ ಬಂದಿತು.
ಪಟ್ಟಣದ ಬಹತೇಕ ೨೭ ವಾರ್ಡಗಳಲ್ಲೂ ಮಳೆಯಾಗಿದ್ದು, ರಸ್ತೆ ತುಂಬೆಲ್ಲಾ ನೀರಾಗಿತ್ತು. ಇನ್ನು ಸಾಮಾಗ್ರಿ ಖರೀದಿಸಲು ಹೊರಟಿದ್ದ ಜನರಿಗೆ ತಕ್ಷಣ ಮಳೆರಾಯನ ಎಂಟ್ರಿಯಿಂದ ಸ್ವಲ್ಪ ಸಮಸ್ಯೆಯೂ ಆಯ್ತು.
ಮಳೆಯಿಂದ ಭೂಮಿ ತಂಪಾಗಿದ್ದು , ಸಣ್ಣದಾಗಿ ಸೋನೆ ಮಳೆ ಮುಂದವರೆದಿದ್ದು, ಜನರಲ್ಲಿ ಖುಷಿ ತಂದಿದೆ. ಮಳೆಯಿಂದ ಸ್ವಲ್ಪ ವಾತಾವರಣ ತಂಪಾಗಿದ್ದು, ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.