ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ‘ಪ್ರಜಾವಾಣಿ’ ದಿನದರ್ಶಿಕೆ ಬಿಡುಗಡೆ

Published 4 ಜನವರಿ 2024, 14:11 IST
Last Updated 4 ಜನವರಿ 2024, 14:11 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ವಂಶೋದಯ ಆಸ್ಪತ್ರೆಯಲ್ಲಿ ಗುರುವಾರ ‘ಪ್ರಜಾವಾಣಿ’ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.

ಕರ್ನಾಟಕದ ಪ್ರಮುಖ ದಿನಪತ್ರಿಕೆಯಾದ ‘ಪ್ರಜಾವಾಣಿ’ ಈ ನಾಡಿಗೆ ಜನಪರವಾದ ಸೈದ್ಧಾಂತಿಕ ನೆಲೆಗಟ್ಟನ್ನು ಕಟ್ಟಿಕೊಟ್ಟ ಪತ್ರಿಕೆ ಎಂದು ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ನಾಗೇಶ್ ಗೌಡ ತಿಳಿಸಿದರು.

ಪತ್ರಿಕೆಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳು ಗಮನ ಸೆಳೆಯುವಂತಿರುತ್ತವೆ. ಏಳು ದಶಕಗಳಿಂದ ರೈತರು, ಗೃಹಿಣಿಯರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಸಾಮಾನ್ಯ ವರ್ಗದ ಜನರ ನೆಚ್ಚಿನ ಪತ್ರಿಕೆಯಾಗಿದೆ ಎಂದು ವಂಶೋದಯ ಆಸ್ಪತ್ರೆಯ ಡಾ. ಅರವಿಂದ, ಡಾ.ವಿನಯ್, ಡಾ.ಸುನಿತಾ ವಿ. ಪ್ರಭು ಶ್ಲಾಘಿಸಿದರು.

ಡಾ.ಭಾನುಪ್ರಕಾಶ್, ಡಾ.ಮಹೇಂದ್ರ ಕಸ್ತೂರಿ, ಪಿಆರ್‌ಒ ಮಂಜುನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT