ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬಾಯಲ್ಲಿ ನೀರೂರಿಸುವ ದೇಸಿ ಮಾವು ‘ಸಕ್ಕರೆ ಗುಟ್ಲ’ಕ್ಕೆ ಮತ್ತೆ ಬೇಡಿಕೆ!

Last Updated 26 ಮೇ 2022, 5:56 IST
ಅಕ್ಷರ ಗಾತ್ರ

ಶ್ರೀನಿವಾಸಪುರ (ಕೋಲಾರ): ಹೊಸ ತಳಿಗಳ ಭರಾಟೆ ಶುರುವಾದ ಮೇಲೆನೇಪಥ್ಯಕ್ಕೆ ಸರಿದಿದ್ದ ಸಾಂಪ್ರದಾಯಿಕ ಮಾವಿನ ತಳಿಗಳ ಪೈಕಿ ‘ಸಕ್ಕರೆ ಗುಟ್ಲ’ ಎಂಬ ಮಾವಿಗೆ ಮತ್ತೆ ಬೇಡಿಕೆ ಕುದುರಿದೆ.

ಸ್ಥಳೀಯವಾಗಿ ‘ಸಕ್ಕರೆ ಗುಟ್ಲ’ ಎಂದು ಕರೆಯಲಾಗುವ ಈ ಮಾವುಇದುಅತ್ಯಂತ ಹಳೆಯ ದೇಸಿ ಮಾವಿನ ತಳಿ. ಮರದ ರೆಂಬೆ ಕೊಂಬೆಗಳ ತುಂಬಾ ಗೊಂಚಲು– ಗೊಂಚಲು ಕಾಯಿ ಬಿಡುವ ಈ ತಳಿಯ ಹಣ್ಣುಗಳಿಗೆ ಮಾರುಕಟ್ಟೆ ಬೇಡಿಕೆ ಇಲ್ಲದ ಕಾರಣ ಬೆಳೆಗಾರರು ಕಾಯಿ ಕೀಳದೆ ಬಿಡುತ್ತಿದ್ದರು. ಹಾಗಾಗಿ ಅವು ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ಪ್ರಾಣಿ, ಪಕ್ಷಿಗಳ ಪಾಲಾಗುತ್ತಿದ್ದವು.

ಹಳೆ ಮಾವಿನ ತೋಟಗಳಲ್ಲಿ ತಮ್ಮಷ್ಟಕ್ಕೆ ತಾವು ಮೊಳೆತು ಬೆಳೆದ ಬೆರಳೆಣಿಕೆಯ ಗಿಡಗಳು ಕಾಯಿ ಬಿಟ್ಟಾಗ ಬೇರೆ ತಳಿಯ ಹಣ್ಣಿನ ಘಮ ಮೀರಿಸುತ್ತವೆ. ರುಚಿಯಲ್ಲೂ ಇವು ಕಡಿಮೆ ಇಲ್ಲ.

ಸಾಮಾನ್ಯ ಬಿರುಗಾಳಿಗೆ ಉದುರದ‘ಸಕ್ಕರೆ ಗುಟ್ಲ’ ಗೊಂಚಲಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ದೊಡ್ಡ ಗೋಲಿ ಗಾತ್ರದ ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆ. ರಸತುಂಬಿದ ನಾರು,ತಿರುಳುಬಾಯಲ್ಲಿ ನೀರೂರಿಸುತ್ತದೆ. ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿ ಸ್ವಾದ ಈ ತಳಿಯ ವಿಶೇಷತೆ.

ಅಲ್ಲಲ್ಲಿ ಬೆಳೆದು ನಿಂತು ಫಲ ನೀಡುತ್ತಿರುವ ಈ ತಳಿಯ ಗಿಡಗಳಿಗೆ ಈಗೀಗ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಉತ್ತಮ ಬೆಲೆಯೂ ದೊರೆಯುತ್ತಿದೆ. ಹೀಗಾಗಿ ನರ್ಸರಿಗಳಲ್ಲಿ ಈ ತಳಿಯ ಮಾವಿನ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ.

*
ಸಕ್ಕರೆ ಗುಟ್ಲ ಮಾವಿಗೆ ಎಲ್ಲ ಕಡೆ ಒಳ್ಳೆ ಬೇಡಿಕೆ ಇದೆ. ಒಂದು ಕೆ.ಜಿ ಹಣ್ಣಿನ ಬೆಲೆ ₹100ಕ್ಕಿಂತ ಹೆಚ್ಚು
-ತಿರುಮಲಪ್ಪ, ಮಾವು ಬೆಳೆಗಾರ, ಪನಸಮಾಕನಹಳ್ಳಿ (ಕೋಲಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT