ಬುಧವಾರ, ಆಗಸ್ಟ್ 4, 2021
20 °C

ಮುಂಗಾರು: ರೈತರಲ್ಲಿ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿದೆ. ಕಳೆದ ವಾರದಿಂದ ಬಿದ್ದ ಮಳೆಗೆ ರೈತರು ಹೊಲಗದ್ದೆಗಳನ್ನು ಹದಗೊಳಿಸಿದ್ದಾರೆ. ಈ ಭಾಗದಲ್ಲಿ ರಾಗಿ, ಭತ್ತ ಪ್ರಮುಖ ಬೆಳೆಯಾಗಿದೆ.

ರೈತರು ತಮ್ಮ ಆರ್ಥಿಕ ಚಟುವಟಿಕೆಯ ಭಾಗವಾಗಿ ಟೊಮೆಟೊ, ಅಲೂಗಡ್ಡೆ, ಕೊತ್ತಂಬರಿಸೊಪ್ಪು, ದಂಟುಸೊಪ್ಪನ್ನು ಬೆಳೆಯನ್ನು ಬೆಳೆಯುತ್ತಾರೆ. ಒಂದು ಫಸಲು ನಷ್ಟ ತಂದುಕೊಟ್ಟರು ಮತ್ತೊಂದು ಫಸಲು ಲಾಭ ತರುವುದೆಂಬುದು ತಾಲ್ಲೂಕಿನ ರೈತರ ಆಶಾಭಾವನೆ.

ಧರಣಿ ಮಳೆ ಬಿದ್ದರೆ ಬೆಳೆ ಬೆಳೆಯುವುದು ಕಾಯಂ ಎಂಬುದು ನಂಬಿಕೆ. ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಸಾಗಿದೆ. ಹಿಂದಿನಂತೆ ಈ ಬಾರಿ ಬಿತ್ತನೆ ಬೀಜದ ಕೊರತೆ ರೈತರನ್ನು ಕಾಡಿಲ್ಲ. ರೈತರು ಕೇಳಿದಷ್ಟು ನೆಲಗಡಲೆ, ರಾಗಿ, ಅವರೆ, ಅಲಸಂದಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ನೀಡಲು ಸಿದ್ಧವಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಮರನಾಥರೆಡ್ಡಿ ತಿಳಿಸಿದರು.

ತಾಲ್ಲೂಕಿನಲ್ಲಿ ರಾಗಿ 13,930 ಹೆಕ್ಟೇರ್, ನೆಲಗಡಲೆ 8 ಸಾವಿರ ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಯಾದ ಅಲೂಗಡ್ಡೆಯನ್ನು ತಾಲ್ಲೂಕಿನ ಕಸಬಾ ಬೈರಕೂರು ಹೋಬಳಿಗಳಲ್ಲಿ ಹಾಗೂ ಟೊಮೆಟೊ ತಾಲ್ಲೂಕಿನ ಐದು ಹೋಬಳಿಗಳಲ್ಲೂ 10 ಸಾವಿರ
ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು