ಮುಳಬಾಗಿಲು: ತಾಲ್ಲೂಕಿನ ಸಿ.ಗುಂಡ್ಲಹಳ್ಳಿ ಗ್ರಾಮದಲ್ಲಿ ಶಾಲಾ ಆವರಣದಲ್ಲಿ ನಿರ್ಮಿಸಲಾಗುತ್ತಿದ್ದ ಮಸೀದಿ ಕಟ್ಟಡವನ್ನು ಮಸೀದಿ ನಿರ್ಮಾಣದ ಸಮಿತಿ ಸದಸ್ಯರೇ ಶನಿವಾರ ನೆಲಸಮ ಮಾಡಿದ್ದಾರೆ. ಈ ಮೂಲಕ ಶಾಲಾ ಆವರಣದಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ ಎಂಬ ಆರೋಪಗಳು ಮತ್ತು ಈ ಕುರಿತು ಉದ್ಭವವಾಗಿದ್ದ ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗಿದೆ.

ರಾಜೇಂದ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಗುಂಡ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯಿತಿ ವತಿಯಿಂದ 300×300 ಅಡಿಗಳಷ್ಟು ಖಾತೆ ಮಾಡಿಕೊಡಲಾಗಿತ್ತು. ಇದೇ ಆವರಣದಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಶಾಲಾ ಆವರಣ ಹಾಗೂ ಮಸೀದಿ ನಿರ್ಮಾಣ ಸ್ಥಳಕ್ಕೆ ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಭೇಟಿ ನೀಡಿ ಸರ್ವೆ ಮಾಡಿಸಿದ್ದರು. ಸ್ಥಳದಲ್ಲಿ ಮೂರು ದಿನಗಳಿಂದ ಸೂಕ್ತವಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಮಸೀದಿ ನಿರ್ಮಾಣದ ಮಸೀದ್–ಇ–ಮದೀನಾ ಮತ್ತು ಎಜುಕೇಷನಲ್ ಹಾಗೂ ಚಾರಿಟಬಲ್ ಟ್ರಸ್ಟ್ ಸಮಿತಿಯು ಸ್ವಯಂಪ್ರೇರಿತವಾಗಿ ಶಾಲಾ ಆವರಣದಲ್ಲಿ ನಿರ್ಮಿಸಲಾಗುತ್ತಿದ್ದ ಮಸೀದಿ ಕಟ್ಟಡವನ್ನು ಜೆಸಿಬಿ ಯಂತ್ರದಿಂದ ಧ್ವಂಸಗೊಳಿಸಿದರು.

ಕಟ್ಟಡದ ನೆಲಸಮ ಹಾಗೂ ಧ್ವಂಸದ ಕುರಿತು ನಮಗೆ ಯಾರಿಂದಲೂ ಒತ್ತಡ ಅಥವಾ ಮತ್ಯಾವುದೇ ಒತ್ತಾಯ ಇಲ್ಲ. ಸ್ವಯಂಪ್ರೇರಿತವಾಗಿ ಮಸೀದಿ ಕಟ್ಟಡವನ್ನು ತೆರವುಗೊಳಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಮಿತಿಯು ಲಿಖಿತವಾಗಿ ತಿಳಿಸಿದೆ.

ಎ.ಎಸ್.ಪಿ ಮನೀಷಾ, ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸತೀಶ್ ಕುಮಾರ್, ನಂಗಲಿ ಸಬ್ ಇನ್ಸ್ಪೆಕ್ಟರ್ ಎಚ್.ಡಿ. ವಿದ್ಯಾಶ್ರೀ, ಪಿಡಿಒ ಸಿ.ಪಿ.ಅಶ್ವಥ್ ನಾರಾಯಣ ಹಾಗೂ ಮಸೀದಿ ಸಮಿತಿಯ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.