ಮುಳಬಾಗಿಲು: ತಾಲ್ಲೂಕಿನ ಹೊಸರಾಯ ದೇವಾಲಯ ನಿಧಿ ಕಳವಿಗೆ ಯತ್ನಿಸಿರುವ ಕಳ್ಳರು ದೇವಾಲಯದ ಗೋಪುರಕ್ಕೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಕುರುಬ ಜನಾಂಗದ ಸಂಪ್ರದಾಯದಂತೆ 9-10 ವರ್ಷಗಳಿಗೊಮ್ಮೆ ನಡೆಯುವ ಕುರುಬರ ದ್ಯಾವರ ನಡೆಯುವ ವಿಶೇಷತೆಯ ಹೊಸರಾಯ ಸ್ವಾಮಿ ದೇವಾಲಯವನ್ನು ನೂರಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ.

9-10 ವರ್ಷಗಳಿಗೊಮ್ಮೆ ನಡೆಯುವ ದ್ಯಾವರ (ಪೂಜೆ), ವಿಜಯ ದಶಮಿ ಪೂಜೆಗಳಲ್ಲಿ ಮಾತ್ರ ತೆರೆಯುವ ದೇವಾಲಯ ಇತರೆ ದಿನಗಳಲ್ಲಿ ತೆರೆಯುವುದಿಲ್ಲ. ಹೀಗಾಗಿ ಹಳೆಯ ದೇವಾಲಯದಲ್ಲಿ ನಿಧಿ (ಬಂಗಾರ ಅಥವಾ ಮೌಲ್ಯಯುತ ವಸ್ತುಗಳು) ಸಿಗಬಹುದು ಎಂಬ ಕಾರಣಕ್ಕೆ ನಿಧಿ ತೆಗೆಯುವ ದಂಧೆಕೋರರು ದೇವಾಲಯದ ಪಾಯ, ಗೋಡೆಗಳು, ದೇವರ ಗೋಪುರ, ಸಣ್ಣಪುಟ್ಟ ಚಪ್ಪಡಿ ಕಲ್ಲುಗಳನ್ನು ಗಡಾರಿ ಸೇರಿದಂತೆ ಇನ್ನಿತರ ಆಯುಧಗಳಿಂದ ಹಾನಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ದೇವಾಲಯದಲ್ಲಿ ನಿಧಿ ಅಡಗಿಸಿಟ್ಟರಬಹುದು ಎಂಬ ಕಾರಣಕ್ಕೆ ನಿಧಿಗಳ್ಳರು ದೇವಾಲಯದ ಪಾಯವನ್ನು 10 ಅಡಿಗಳಷ್ಟು ಆಳವಾಗಿ ಸುರಂಗದ ರೀತಿ ಅಗೆದಿದ್ದಾರೆ. ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರಾದ ಅರಿವು ಪ್ರಭಾಕರ್, ಸೂರ್ಯಪ್ರಕಾಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.