ಮುಳಬಾಗಿಲು: ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ನಿರ್ಮಾಣವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನಿರ್ವಹಣೆ ಕೊರತೆ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ಅನೇಕ ಕಡೆ ಬೀಗ ಜಡಿಯಲಾಗಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಒಟ್ಟು 209 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇವುಗಳಲ್ಲಿ 18 ಘಟಕಗಳು ಮುಚ್ಚಿವೆ. ಕೊಳವೆ ಬಾವಿಗಳಲ್ಲಿ ಮೋಟಾರುಗಳಿಲ್ಲದೆ, ಘಟಕಗಳ ಯಂತ್ರಗಳಲ್ಲಿ ತಾಂತ್ರಿಕ ಹಾಗೂ ಯಾಂತ್ರಿಕ ಸಮಸ್ಯೆ, ಕೆಲವು ಘಟಕಗಳ ನಿರ್ವಹಣೆಯ ಕೊರತೆ, ಜಲಗಾರರ ಸಮಸ್ಯೆ ಮತ್ತಿತರರ ಕಾರಣಗಳಿಂದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹಾಗಾಗಿ ಕೆಲವರು ದೂರದ ಊರಿಂದ ನೀರನ್ನು ತಂದು ಕುಡಿಯುವಂತಾಗಿದೆ. ಇನ್ನೂ ಕೆಲವೆಡೆ ಕೊಳವೆ ಬಾವಿಗಳ ನೀರನ್ನೇ ಕುಡಿಯುವಂತಾಗಿದೆ.

ತಾಲ್ಲೂಕಿನ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಮುದಿಗೆರೆ ಮಜರಾ ಗಡ್ಡೂರು, ಪಟ್ರಹಳ್ಳಿ, ಸೀಗೆಹೊಸಹಳ್ಳಿ, ದೊಡ್ಡ ಗೊಲ್ಲಹಳ್ಳಿ, ಮರವೇಮನೆ, ಹೆಬ್ಬಣಿ ಮತ್ತಿತರರ 18 ಗ್ರಾಮಗಳಲ್ಲಿ 18 ಘಟಕಗಳನ್ನು ಮುಚ್ಚಲಾಗಿದೆ. ಒಂದೊಂದು ಕಡೆ ಒಂದೊಂದು ಸಮಸ್ಯೆ ಇವೆ. ಕೆಲವು ಘಟಕಗಳನ್ನು ಮುಚ್ಚಿ ಸುಮಾರು ಮೂರು ನಾಲ್ಕು ವರ್ಷಗಳಾದರೂ ಇನ್ನೂ ಘಟಕಗಳ ರಿಪೇರಿಯಾಗಿಲ್ಲ ಎಂಬುದು ಬೇಸರದ ಸಂಗತಿ.

ತಾಲ್ಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ನೀರಿನ ಘಟಕದ ಸುತ್ತಲೂ ಗಿಡಗಂಟೆಗಳು ಬೆಳೆದು ನಿಂತಿವೆ. ಕೊಳವೆಬಾವಿ ಪೈಪ್ಗಳು ತುಕ್ಕು ಹಿಡಿದು ಮುರಿದು ಬೀಳುವ ಹಂತಕ್ಕೆ ತಲುಪಿದ್ದರೆ, ವಿದ್ಯುತ್ ತಂತಿಗಳು ಕೆಳಗಡೆ ನೇತಾಡುತ್ತಾ ಒಂದು ವರ್ಷದಿಂದ ಘಟಕಕ್ಕೆ ಬೀಗ ಜಡಿಯಲಾಗಿದೆ. ಹಾಗಾಗಿ ಇಲ್ಲಿನ ಜನತೆ ನಂಗಲಿಯಿಂದ ನೀರನ್ನು ತಂದು ಕುಡಿಯುವಂತಾಗಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಪಟ್ರಹಳ್ಳಿ ಶುದ್ಧ ಕುಡಿವ ನೀರಿನ ಘಟಕದ ಬಾಗಿಲು ಮುರಿದು ಗಾಳಿಗೆ ನೇತಾಡುತ್ತಿದ್ದರೆ, ಗಾಜಿನ ಬಾಗಿಲುಗಳನ್ನು ಕೆಲವು ಪುಂಡ ಪೋಕರಿಗಳು ಮುರಿದು ನಾಶ ಪಡಿಸಿದ್ದಾರೆ. ಲಕ್ಷಾಂತರ ಬೆಲೆ ಬಾಳುವ ಯಂತ್ರಗಳು ಸಂಪೂರ್ಣವಾಗಿ ತುಕ್ಕು ಹಿಡಿದು ನಾಶವಾಗುತ್ತಿವೆ.

ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾರಂಭವಾದ ಹೆಬ್ಬಣಿಯ ನೀರಿನ ಘಟಕ ಜನರ ಬಳಕೆಗೆ ಬಾರದೆ ಮುಚ್ಚಿ ಸುಮಾರು ನಾಲ್ಕು ವರ್ಷ ಕಳೆದಿದೆ. ಆದರೆ ದುರಸ್ತಿಯಾಗಿಲ್ಲ. ಹಾಗಾಗಿ ಖಾಸಗಿಯವರು ವಾಹನಗಳಲ್ಲಿ ನೀರನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಒಂದು ಕ್ಯಾನಿಗೆ ₹5 ನೀಡಿ ಗ್ರಾಮಸ್ಥರು ಖರೀದಿಸುವಂತಾಗಿದೆ.

ತಾಲ್ಲೂಕಿನ ಮರವೇಮನೆ ಗ್ರಾಮದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಪ್ರಾರಂಭವಾದ ಘಟಕದ ಕಟ್ಟಡದ ಗೋಡೆಗಳು ಬಹುತೇಕ ಸೀಳಿಕೊಂಡಿದ್ದು, ಕೆಲವೇ ದಿನಗಳಲ್ಲಿ ಬೀಳುವ ಸ್ಥಿತಿ ತಲುಪಿದೆ. ಈಡೀ ಕಟ್ಟಡ ಒಂದು ಕಡೆಗೆ ವಾಲಿಕೊಂಡಿದೆ. ಹಾಗಾಗಿ ಕೂಡಲೇ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನು ಉಳಿದ ಕಡೆಗಳ ಶುದ್ಧ ನೀರಿನ ಘಟಕಗಳೂ ಸಹ ನಾನಾ ಬಗೆಯ ಸಮಸ್ಯೆಗಳಿಂದ ಬೀಗ ಹಾಕಲಾಗಿದ್ದು, ಶುದ್ಧ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳು ಘಟಕಗಳನ್ನು ದುರಸ್ತಿಗೊಳಿಸಿ ಯೋಜನೆ ಯಶಸ್ವಿಯಾಗುವಂತೆ ಮಾಡಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.