ಭಾನುವಾರ, ಜುಲೈ 25, 2021
22 °C
ದೇವರಾಯಸಮುದ್ರ ಗ್ರಾಮದ ಗುಡ್ಡಗಳಲ್ಲಿ ಗಣಿಗಾರಿಕೆ

ಕೋಲಾರ | ಎಂ.ಸ್ಯಾಂಡ್ ಗಣಿಗಾರಿಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ತಾಲ್ಲೂಕಿನ ದೇವರಾಯಸಮುದ್ರ ಗ್ರಾಮಕ್ಕೆ ಸೇರಿದ ಬೆಟ್ಟ ಗುಡ್ಡಗಳಲ್ಲಿ ಕೆಲ ಪ್ರಭಾವಿಗಳಿಗೆ ಎಂ.ಸ್ಯಾಂಡ್ ಗಣಿಗಾರಿಕೆ ಮಾಡಲು ಅನುಮತಿ ನೀಡಿರುವುದು ಸರಿಯಲ್ಲ. ಇದನ್ನು ಕೂಡಲೇ ಕೈಬಿಡಬೇಕು ಎಂದು ದೇವರಾಯಸಮುದ್ರ ಬೆಟ್ಟ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಜು ಹಾಗೂ ಸಮಿತಿ ಸದಸ್ಯರು ಒತ್ತಾಯಿಸಿದರು.

ನಗರದ ಮಿನಿವಿಧಾನಸೌಧದಲ್ಲಿ ಸೋಮವಾರ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಮತ್ತು ತಾಲ್ಲೂಕು ಪಂಚಾಯಿತಿ ಇಒ ಎಂ.ಬಾಬು ಅವರಿಗೆ ಮನವಿ ಸಲ್ಲಿಸಿದರು.

ಸರ್ವೆ ನಂ. 199ರಲ್ಲಿ ಸುಮಾರು 1,300 ಎಕರೆ ಪ್ರದೇಶದಲ್ಲಿ ಗುಡ್ಡಗಳು ಹರಡಿಕೊಂಡಿದ್ದು, ಅಲ್ಲಿ ಬೀಳುವ
ಮಳೆ ನೀರಿನಿಂದ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಜಾನುವಾರುಗಳಿಗೆ ಹಾಗೂ ಜನರಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಸಿಗುತ್ತಿದೆ. ಇಂತಹ ಗುಡ್ಡಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ದೂರಿದರು.

ಸ್ಥಳೀಯ ಗ್ರಾಮಗಳ ಜನರಿಗೆ ಮಾಹಿತಿ ನೀಡದೆ ಮತ್ತು ಮುನ್ಸೂಚನೆ ಇಲ್ಲದೆ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳೊಂದಿಗೆ ಕೈ ಜೋಡಿಸಿ ಎಂ.ಸ್ಯಾಂಡ್ ಗಣಿಗಾರಿಕೆಯ ಘಟಕಗಳನ್ನು ಮಂಜೂರು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಚಂಗಲರಾಯಪ್ಪ, ದೇವರಾಯಸಮುದ್ರ ಸೋಮಶೇಖರ್, ಮಲ್ಲಪ್ಪನಹಳ್ಳಿ ವೆಂಕಟೇಶನ್, ಹೊಸಕೆರೆ ರಮೇಶ್, ಸೋಮು, ಕೀಲುಹೊಳಲಿ ಹರೀಶ್ ಸಂದರ್ಭದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು