‘ಉರಿ’ ಸರ್ಜಿಕಲ್ ಸ್ಟ್ರೈಕ್ ಬಳಿಕ ಸ್ಥಗಿತಗೊಂಡಿದ್ದ ಟೊಮೆಟೊ ಪೂರೈಕೆ ಟೊಮೆಟೊ ಖರೀದಿಸುವ ಉತ್ತರ ಭಾರತದ ವರ್ತಕರಿಂದ ಪಾಕ್‌ಗೆ ಸಾಗಣೆ ಟೊಮೆಟೊ ಸುಗ್ಗಿ ವೇಳೆ ಬಾಂಗ್ಲಾದೇಶ, ನೇಪಾಳಕ್ಕೂ ಸರಬರಾಜು
‘ಉರಿ’ ಘಟನೆ ಬಳಿ ನಮ್ಮಿಂದ ಪಾಕಿಸ್ತಾನಕ್ಕೆ ಟೊಮೆಟೊ ಸಾಗಣೆ ಬಹುತೇಕ ಸ್ಥಗಿತಗೊಂಡಿದೆ. ಇಲ್ಲಿಂದ ನೇರವಾಗಿ ಸಾಗಣೆ ಆಗುತ್ತಿಲ್ಲ. ಸುಗ್ಗಿ ವೇಳೆ ಬಾಂಗ್ಲಾ ನೇಪಾಳಕ್ಕೆ ಪೂರೈಕೆ ಆಗುತ್ತದೆ
ಎನ್.ಕಿರಣ್ ಕಾರ್ಯದರ್ಶಿ ಎಪಿಎಂಸಿ
ಬೇಡಿಕೆ ಬಂದಾಗ ಇಲ್ಲಿ ಬೆಲೆ ಕುಸಿದಾಗ ಪಾಕಿಸ್ತಾನಕ್ಕೆ ಟೊಮೆಟೊ ಸಾಗಣೆ ಮಾಡುತ್ತಿದ್ದದ್ದು ಉಂಟು. ಇನ್ನು ಆ ದೇಶಕ್ಕೆ ಸಾಗಣೆ ಮಾಡಲೇಬಾರದೆಂಬುದು ನಮ್ಮೆಲ್ಲರ ನಿಲುವು
ಸಿಎಂಆರ್ ಶ್ರೀನಾಥ್ ಸಿಎಂಆರ್ ಮಂಡಿ ಮಾಲೀಕ ಎಪಿಎಂಸಿ
ಟೊಮೆಟೊಗೆ ರೇಟ್ ಸಿಗದಿದ್ದರೂ ಪರವಾಗಿಲ್ಲ ಪಾಕಿಸ್ತಾನಕ್ಕೆ ಸಾಗಿಸಬಾರದು. ತೋಟದಲ್ಲೇ ಬಿಟ್ಟರೂ ಚರಂಡಿಗೆ ಎಸೆದರೂ ಪರವಾಗಿಲ್ಲ. ದೇಶ ವಿಚಾರ ಬಂದಾಗ ರೈತರು ಒಗ್ಗಟ್ಟಾಗುತ್ತಾರೆ