ಗುರುವಾರ , ಆಗಸ್ಟ್ 5, 2021
21 °C

ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್‌.ವಡ್ಡಹಳ್ಳಿಯಲ್ಲಿ ಮರಳಿನ ದಿಬ್ಬ ಕುಸಿದು ಮೃತಪಟ್ಟಿದ್ದ ಕಾರ್ಮಿಕ ಅಯೂಬ್‌ (25) ಅವರ ಶವವನ್ನು ಪೊಲೀಸರು ಗುರುವಾರ ಹೊರತೆಗೆದು ತಹಶೀಲ್ದಾರ್‌ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.

ಮುಳಬಾಗಿಲಿನ ಬೂಸಾಲಕುಂಟೆಯ ಅಯೂಬ್‌ ಅವರು ದೇವರಾಜ್‌ ಎಂಬುವರ ಜಮೀನಿನಲ್ಲಿ ಮರಳು ತೆಗೆಯುವ ವೇಳೆ ಬುಧವಾರ (ಜೂನ್‌ 3) ನಸುಕಿನಲ್ಲಿ ಮೃತಪಟ್ಟಿದ್ದರು. ಬಳಿಕ ಕದ್ದುಮುಚ್ಚಿ ಅಯೂಬ್‌ರ ಶವವನ್ನು ಬೂಸಾಲಕುಂಟೆಗೆ ಸಾಗಿಸಿಕೊಂಡು ಬಂದು ಹೂತಿಟ್ಟು ಪ್ರಕರಣ ಮರೆಮಾಚಲಾಗಿತ್ತು.

ಬುಧವಾರ ರಾತ್ರಿ ಈ ವಿಷಯ ತಿಳಿದ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದರು. ಮರಳು ದಂಧೆಯಲ್ಲಿ ಜಮೀನಿನ ಮಾಲೀಕ ದೇವರಾಜ್‌ರ ಪಾತ್ರವಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.