ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಟ್ಲಘಟ್ಟ ತಾಲ್ಲೂಕಿನ ಅಮರಾವತಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕಟ್ಟಡದ ಮೊದಲ ಹಂತದ ಕಾಮಗಾರಿ ನವೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ನಗರ ಹೊರವಲಯದ ನಂದಿನಿ ಪ್ಯಾಲೇಸ್ನಲ್ಲಿ ಶುಕ್ರವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಅವರು ಮಾತನಾಡಿದರು.

‘ಹೊಸ ಕ್ಯಾಂಪಸ್ನ ಎರಡನೇ ಹಂತದ ಕಾಮಗಾರಿ ಈಚೆಗೆ ಕ್ಯಾಬಿನೆಟ್ನಲ್ಲಿ ₹123 ಕೋಟಿ ಬಿಡುಗಡೆ ಮಾಡಲಾಗಿದೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸುತ್ತೇವೆ. ಕ್ಯಾಂಪಸ್ಗೆ ರಸ್ತೆ ಮಾಡಲು ₹9 ಕೋಟಿ ಅಂದಾಜು ಪಟ್ಟಿ ತಯಾರಿಸಿದ್ದು, ಲೋಕೋಪಯೋಗಿ ಸಚಿವರಿಗೆ ವಿನಂತಿ ಮಾಡಿ ಅನುದಾನ ತರಲಾಗುವುದು’ ಎಂದರು.

‘ಚಿಕ್ಕಬಳ್ಳಾಪುರ ಜಿಲ್ಲೆ ನನ್ನದಾಗಿದ್ದರೂ ನಮ್ಮ ಬೇರುಗಳು ಇಂದಿಗೂ ಕೋಲಾರ ಜಿಲ್ಲೆಯಲ್ಲಿವೆ. ಹೀಗಾಗಿ, ಕೋಲಾರದ ಸರ್ಕಾರಿ ಪ್ರಥಮದರ್ಜೆ ಕಾಲೇಜು (ಬಾಲಕರ ಕಾಲೇಜು) ಮತ್ತು ಮಹಿಳೆಯರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅಭಿವೃದ್ಧಿಗೆ ಸುಮಾರು ₹80 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

‘ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಹಯೋಗದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಉನ್ನತ ಶಿಕ್ಷಣದಲ್ಲಿ ಕೌಶಲಕ್ಕೆ ಸಂಬಂಧಿಸಿದಂತೆ ಹೊಸ ಪ್ರಯೋಗ ಮಾಡಲಾಗುತ್ತಿದೆ. ಕರ್ನಾಟಕ ಕ್ವಾಂಟಮ್ ಹೆಸರಿನಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಮ್ಮೇಳನ ನಡೆಸಿದ್ದೇವೆ. ಪಠ್ಯದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಅಳವಡಿಸಿಕೊಂಡು ಭವಿಷ್ಯದ ಸವಾಲುಗಳಿಗೆ ಸಜ್ಜಾಗಬೇಕು. ಈ ಸಂಬಂಧ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡುತ್ತೇನೆ. ಜೊತೆಗೆ ಕೃತಕ ಬುದ್ಧಿಮತ್ತೆ (ಎಐ) ಕೂಡ ಹಲವಾರು ಬದಲಾವಣೆ ತರುತ್ತಿದ್ದು, ಈ ವಿಚಾರಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ’ ಎಂದರು.

‘ಇದು ವಿದ್ಯಾರ್ಥಿಗಳ ಜೀವನದ ನಿರ್ಣಾಯಕ ಸಂದರ್ಭ ಹಾಗೂ ಖುಷಿಯ ಸಂದರ್ಭ. ಹಾಗೆಯೇ ಮೂವರು ಸಾಧಕರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಪಿಚ್ಚಳ್ಳಿ ಶ್ರೀನಿವಾಸ್ ನನಗೆ ಗುರುವಿದ್ದಂತೆ. ಮೊದಲ ಬಾರಿ ಶಾಸಕನಾಗಿದ್ದ ಸಂದರ್ಭದಲ್ಲಿ ವಿಧಾನಸೌಧದಲ್ಲಿ ನಡೆದ ಶಾಸಕರ ದಿನಾಚರಣೆ ಸಂದರ್ಭದಲ್ಲಿ ಅವರು ನನ್ನ ಕೈಯಲ್ಲಿ ಕೆರೆಯ ಹಾಡು ಹಾಡಿಸಿದ್ದರು. ಈಗ ಅವರಿಗೆ ನಾನು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವ ಅವಕಾಶ ಬಂದೊದಗಿದೆ’ ಎಂದು ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ‘ಸ್ವಾತಂತ್ರ್ಯಾನಂತರ ದೇಶವು ತಂತ್ರಜ್ಞಾನ ಮತ್ತು ಆರ್ಥಿಕವಾಗಿ ಅಪಾರ ಪ್ರಗತಿ ಸಾಧಿಸಿದೆ. ದೊಡ್ಡ ಕೈಗಾರಿಕೆಗಳು, ಅಣೆಕಟ್ಟುಗಳು, ಮತ್ತು ಆಧುನಿಕ ತಂತ್ರಜ್ಞಾನಗಳು ನಮ್ಮ ಅಭಿವೃದ್ಧಿಯ ಭೌತಿಕ ಸಂಕೇತಗಳಾಗಿವೆ. ಆದರೆ, ಈ ಬೆಳವಣಿಗೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದೇವೆ’ ಎಂಬ ಕಳವಳ ವ್ಯಕ್ತಪಡಿಸಿದರು

‘ದೇಶದ ಪ್ರಗತಿಯನ್ನು ಕೇವಲ ಆರ್ಥಿಕ ಬೆಳವಣಿಗೆಯಿಂದ ಅಳೆಯುವುದು ಸರಿಯಲ್ಲ. ವೈದ್ಯಕೀಯ, ವಿಜ್ಞಾನ ಮತ್ತು ಐ.ಟಿ ಕ್ಷೇತ್ರಗಳಲ್ಲಿ ಮುನ್ನಡೆದಿದ್ದರೂ ನಮ್ಮ ಶಿಕ್ಷಣವು ಹೆಚ್ಚಾಗಿ ಭೌತಿಕ ಪ್ರಗತಿಯತ್ತ ಮಾತ್ರ ಗಮನ ಹರಿಸುತ್ತಿದೆ’ ಎಂದರು.

‘ಗಾಂಧೀಜಿ ತಮ್ಮ 'ಹಿಂದ್ ಸ್ವರಾಜ್' ಪುಸ್ತಕದಲ್ಲಿ ಯಾಂತ್ರಿಕ ನಾಗರಿಕತೆ ಮಾನವೀಯ ಮೌಲ್ಯಗಳನ್ನು ಅತಿಕ್ರಮಿಸುವುದರ ಬಗ್ಗೆ ಎಚ್ಚರಿಕೆ ನೀಡಿದ್ದರು. ವಿಜ್ಞಾನವು ಮಾನವೀಯತೆಯೊಂದಿಗೆ ಬೆರೆತಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ ಎಂಬುದಾಗಿ ಅವರು ನಂಬಿದ್ದರು’ ಎಂದು ನುಡಿದರು.

‘ಶಿಕ್ಷಣದ ಉನ್ನತ ಹಂತಗಳಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ವಿಷಯಗಳು ಕಣ್ಮರೆಯಾಗುತ್ತಿವೆ. ಗೋಖಲೆ, ತಿಲಕ್, ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತಹ ಮಹಾನ್ ನಾಯಕರ ತಾತ್ವಿಕ ವಿಚಾರಗಳನ್ನು ಪಠ್ಯಕ್ರಮದಲ್ಲಿ ಸೇರಿಸುವುದು ಇಂದಿನ ಅಗತ್ಯವಾಗಿದೆ. ಇದು ವಿದ್ಯಾರ್ಥಿಗಳಿಗೆ ಸಮಾಜವನ್ನು ಸಹಾನುಭೂತಿಯಿಂದ ನೋಡಲು ಸಹಾಯ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ.ನಿರಂಜನ ವಾನಳ್ಳಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಕುಲಸಚಿವರಾದ ಪ್ರೊ.ಎನ್.ಲೋಕನಾಥ್ (ಮೌಲ್ಯಮಾಪನ), ಸಿ.ಎನ್.ಶ್ರೀಧರ್ (ಆಡಳಿತ), ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದ ಡೀನ್ ಪ್ರೊ.ಡಿ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷಾ, ಜೈದೀಪ್, ರವೀಶ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿಶ್ವವಿದ್ಯಾಲಯದ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಘಟಿಕೋತ್ಸವದಲ್ಲಿ ಜಾನಪದ ಗಾಯಕ ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್ (ಸಂಗೀತ ಮತ್ತು ರಂಗಭೂಮಿ ಕ್ಷೇತ್ರ) ಉದ್ಯಮಿ ಹಾಲಾಡಿ ಶ್ರೀನಿವಾಸ ಶೆಟ್ಟಿ (ಸಾಮಾಜಿಕ ಸೇವಾ ಕ್ಷೇತ್ರ) ಹಾಗೂ ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗ (ಉದ್ಯಮ ಕ್ಷೇತ್ರ) ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಕೋಲಾರ ಜಿಲ್ಲೆಯ ಪಿಚ್ಚಳ್ಳಿ ಶ್ರೀನಿವಾಸ್ ‘ಗೌರವ ಡಾಕ್ಟರೇಟ್ ಪದವಿ ಒಲಿದಿರುವುದು ತುಂಬಾ ಖುಷಿ ನೀಡಿದೆ. ಜಿಲ್ಲೆಯಲ್ಲಿ ಕೆರೆ ಕಟ್ಟಿದ ಕೈಗಳಿಗೆ ಸಿಕ್ಕ ಗೌರವವಿದು. ಕೈವಾರ ತಾತಯ್ಯನ ತತ್ವಪದ ಹಾಡುವವರಿಗೆ ಸಿಕ್ಕಿದ ಗೌರವ ಕೆರೆಗಳೇ ನಮ್ಮ ಬದುಕು ಪಯಣ. ತಾಯಿಯಿಂದ ಕಲಿತ ತತ್ವಪದಗಳೇ ಜೀವದ್ರವ್ಯವಾಗಿವೆ. ಹಿರಿಯರ ನುಡಿಗಳನ್ನು ಮುಂದುವರಿಸಲು ನಾನು ಗಾಯಕನಾದೆ. ಇವು ನನ್ನನ್ನು ಇಲ್ಲಿವರೆಗೆ ಕರೆತಂದಿವೆ’ ಎಂದರು.

ಮಾಲೂರಿನಲ್ಲಿ ‘ಸಾರಂಗರಂಗ’ ಸಂಸ್ಥೆಯ ಮೂಲಕ ಕಲಾ ಮತ್ತು ಸಂಸ್ಕೃತಿ ಸೇವೆಯಲ್ಲಿ ತೊಡಗಿರುವ ಅವರು ಕೆರೆಯ ಹಾಡು ಹಾಡಿದರು. ಉಡುಪಿ ಜಿಲ್ಲೆಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ ‘ಗೌರವ ಡಾಕ್ಟರೇಟ್ ಪದವಿ ಬಂದಿರುವುದು ಸಹಜವಾಗಿಯೇ ಖುಷಿ ತಂದಿದೆ. ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ. ದುಡಿಮೆಯ ಒಂದು ಭಾಗವನ್ನು ಸಮಾಜದ ಒಳಿತಿಗಾಗಿ ನೀಡುತ್ತಿದ್ದೇನೆ. ನನ್ನನ್ನು ಈ ಗೌರವಕ್ಕೆ ಆಯ್ಕೆ ಮಾಡಿದವರಿಗೆ ಧನ್ಯವಾದಗಳು. ಒಳ್ಳೆಯ ಕೆಲಸವನ್ನು ಗುರುತಿಸುತ್ತಾರೆ ಎಂಬುದಕ್ಕೆ ಈ ಗೌರವವೇ ಸಾಕ್ಷಿ’ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ನೆಲೆಸಿರುವ ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗ ಮಾತನಾಡಿ ‘ಗೌರವ ಡಾಕ್ಟರೇಟ್ ಪದವಿ ಬರಬಹುದೆಂದು ಕನಸಿನಲ್ಲೂ ನೆನೆಸಿರಲಿಲ್ಲ. ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲವಿದೆ. ಈಗ ಈ ಗೌರವ ಒಲಿದಿರುವುದು ಖುಷಿ ಉಂಟು ಮಾಡಿದೆ. ಸಾಧನೆ ಮಾಡಿ ಇಂಥ ಗೌರವ ಗಳಿಸಿಕೊಳ್ಳಬೇಕು. ಈಗ ಒಲಿದಿರುವ ಗೌರವದಿಂದ ಜವಾಬ್ದಾರಿ ಹೆಚ್ಚಾಗಿದೆ’ ಎಂದರು.

ಘಟಿಕೋತ್ಸವದಲ್ಲಿ ತುಸು ಗೊಂದಲ

ಘಟಿಕೋತ್ಸವದ ಕಾರ್ಯಕ್ರಮಗಳ ವೇಳಾಪಟ್ಟಿಯ ಶಿಷ್ಟಾಚಾರದಲ್ಲಿ ಗೊಂದಲ ಉಂಟಾಗಿ ಅದಲು ಬದಲಾಗಿದ್ದಕ್ಕೆ ರಾಜ್ಯಪಾಲರು ಬುದ್ಧಿವಾದ ಹೇಳಿದರು. ‘ಘಟಿಕೋತ್ಸವ ಆರಂಭವಾಗಿದೆ’ ಎಂದು ರಾಜ್ಯಪಾಲರು ಅಧಿಕೃತವಾಗಿ ಘೋಷಿಸುವ ಮೊದಲೇ ಕುಲಪತಿ ವರದಿ ವಾಚನ ಮಾಡಲು ಆರಂಭಿಸಿದರು. ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವಾಗಲೂ ಗೊಂದಲ ಉಂಟಾಯಿತು. ಆಗ ರಾಜ್ಯಪಾಲರು ಕುಲಪತಿಯನ್ನು ಕರೆದು ಸರಿಪಡಿಸಿಕೊಳ್ಳುವಂತೆ ಹೇಳಿದರು. ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ ಸರಿಯಾಗಿ ಪೂರ್ವತಯಾರಿ ನಡೆಸಬೇಕು ಎಂದು ಸಲಹೆ ನೀಡಿ ನಗು ಬೀರಿದರು.

ಜೀವನದಲ್ಲಿ ಬಹಳಷ್ಟು ಸವಾಲು ಅಡೆತಡೆ ಎದುರಾಗುತ್ತವೆ. ನಮ್ಮನ್ನು ಪದವೀಧರರನ್ನಾಗಿ ಮಾಡಿರುವ ಪೋಷಕರ ಪರಿಶ್ರಮ ನೆನೆದು ಮುನ್ನುಗ್ಗಬೇಕು. ಅವರ ಕನಸು ನನಸು ಮಾಡಬೇಕು
–ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.