ಶ್ರೀನಿವಾಸಪುರ: ವಿಧಾನಸಭೆ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಶುಕ್ರವಾರ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಆಂಧ್ರದ ಚೀಕಲುಬೈಲು ಗ್ರಾಮದ ನಿವಾಸಿ ಗಂಗುಲಮ್ಮ (ಗಂಗೂ) ಅವರ ಕ್ಷೇಮ ವಿಚಾರಿಸುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಗಂಗುಲಮ್ಮ ಅಡ್ಡಗಲ್ ಗ್ರಾಮದ ತಲಾರಿ ಗಂಗುಲಪ್ಪ ಮತ್ತು ಕದಿರೆಕ್ಕ ದಂಪತಿಯ ಐದನೇ ಪುತ್ರಿ. ಈ ದಂಪತಿಗೆ ಒಟ್ಟು ಆರು ಜನ ಹೆಣ್ಣು ಮಕ್ಕಳು. ಸೀತಕ್ಕ, ರಾಮಕ್ಕ, ಸಾಲಮ್ಮ, ನರಸಮ್ಮ ನಂತರ ಗಂಗುಲಮ್ಮ ಜನಿಸಿದರು. ಆರನೇ ಮಗಳು ಸುಬ್ಬಮ್ಮ. ಗಂಗುಲಮ್ಮ ಸೇರಿದಂತೆ ಆರೂ ಜನರನ್ನು ಚೀಕಲುಬೈಲಿಗೆ ವಿವಾಹ ಮಾಡಿಕೊಡಲಾಯಿತು. ಈಗ ಗಂಗುಲಮ್ಮ ಹಾಗೂ ಸುಬ್ಬಮ್ಮ ಮಾತ್ರ ಇದ್ದಾರೆ.

ಅಡ್ಡಗಲ್ ಗ್ರಾಮದ ತಮ್ಮ ಮನೆಯ ಮುಂದೆ ಕೂತಿದ್ದಾಗ ಗಂಗುಲಮ್ಮ ತನ್ನ ಎಂಜಲು ಹಾಲು ಕುಡಿದು ಬೆಳೆದಿರುವ ರಮೇಶ್ ಕುಮಾರ್ ಜೊತೆ ಮಾತನಾಡಬೇಕೆಂದು ಬಯಸಿ ಬಂದಿದ್ದರು.

ರಮೇಶ್ ಕುಮಾರ್ ಅವರಿಗೆ ಅದೆಷ್ಟೊ ವರ್ಷಗಳ ನಂತರ ಗುಂಗುಲಮ್ಮ ಅವರನ್ನು ನೋಡುವ ಅವಕಾಶ ಸಿಕ್ಕಿತು. ಗಂಗುಲಮ್ಮ ತಾವೇ ಪರಿಚಯಿಸಿಕೊಂಡು ತನ್ನ ಗುರುತು ಸಿಕ್ಕಲಿಲ್ಲವೇ ಎಂದು ಕೇಳಿದರು.

ತಂದೆ, ತಾಯಿ, ಅವಿಭಾಜ್ಯ ಕುಟುಂಬದಲ್ಲಿದ್ದ ಇಬ್ಬರು ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ಜೊತೆಯಲ್ಲೇ ಜನಿಸಿದ ಇಬ್ಬರು ಅಣ್ಣಂದಿರು. ದೊಡ್ಡಕ್ಕ, ಬಾಳ ಸಂಗಾತಿ ವಿಜಯಮ್ಮ, ಹಾಲುಣಿಸಿ ಕದಿರೆಕ್ಕ, ಆಕೆಯ ಪತಿ ಗಂಗುಲಪ್ಪ ಮತ್ತು ಅವರ ನಾಲ್ವರು ಹೆಣ್ಣು ಮಕ್ಕಳು ಎಲ್ಲರೂ ಈ ಲೋಕವನ್ನು ಬಿಟ್ಟಿದ್ದಾರೆ. ತನಗೆ ಒಂದು ಅಪರೂಪದ ನಿಧಿ ಸಿಕ್ಕಿತು ಎಂದು ಭಾವಿಸಿ ಗಂಗುಲಮ್ಮನ್ನು ಕರೆದು ಅಪ್ಪಿಕೊಂಡು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಹಲವು ವಿಚಾರ ನೆನೆದು ಕೆ.ಆರ್.ರಮೇಶ್ ಕುಮಾರ್ ಭಾವುಕರಾದರು, ಅವರ ಕಣ್ಣುಗಳು ತುಂಬಿಬಂದವು.

ಇದೇ ಅಡ್ಡಗಲ್ ಗ್ರಾಮದಲ್ಲಿ ರಾಮಪ್ಪ ಮತ್ತು ತಿಪ್ಪಮ್ಮ ಎಂಬ ಬ್ರಾಹ್ಮಣ ಕುಟುಂಬ ಇತ್ತು. ಅವರಿಗೆ ಎಂಟು ಜನ ಮಕ್ಕಳು. ಅದರಲ್ಲಿ ಬದುಕಿ ಉಳಿದವರು ಆರು ಜನ ಮಾತ್ರ. ಈಗ ಕೇವಲ ಮೂರು ಜನ ಉಳಿದಿದ್ದಾರೆ. ತಿಪ್ಪಮ್ಮ ಅವರ ಎಂಟನೇ ಮಗು ರಮೇಶ್ ಕುಮಾರ್.

ರಮೇಶ್ ಕುಮಾರ್ ಜನಿಸಿದಾಗ ತಿಪ್ಪಮ್ಮ ಅವರ ಆರೋಗ್ಯ ತೀವ್ರ ಹದೆಗಟ್ಟಿತ್ತು. ಆಗಿನ ಸಂದರ್ಭಕ್ಕೆ ತಕ್ಕಂತೆ ಇಂದಿನ ಲಕ್ಷ್ಮಿಪುರ (ಏರು ಕಾಲುವೆ) ಗ್ರಾಮದಲ್ಲಿದ್ದ ವೈದ್ಯರ ಸಲಹೆ ಮೇರೆಗೆ ರಮೇಶ್ ಕುಮಾರ್ ಅವರಿಗೆ ತಾಯಿಯ ಸ್ತನಪಾನ ನಿರ್ಬಂಧಿಸಲಾಯಿತು. ರಮೇಶ್ ಕುಮಾರ್ ಬದುಕಿ ಉಳಿಯುವುದೇ ಕಷ್ಟ ಎಂಬಂಥ ಪರಿಸ್ಥಿತಿ ಏರ್ಪಟ್ಟಿತು. ಇದೇ ಸಮಯದಲ್ಲಿ ತಲಾರಿ ಕದಿರೆಕ್ಕ ಅವರು ಮಗುವಿಗೆ ಜನ್ಮ ನೀಡಿದ್ದರು. ಬ್ರಾಹ್ಮಣ ತಾಯಿಯ ಹೊಟ್ಟೆಯಲ್ಲಿ ಜನಿಸಿ ನಾಯಕರ ಸಮಾಜದ ತಲಾರಿ ಕದಿರೆಕ್ಕನ ಮೊಲೆ ಹಾಲು ಕುಡಿದು ಬೆಳೆದಿದ್ದು ರಮೇಶ್ ಕುಮಾರ್.

ರಮೇಶ್ ಕುಮಾರ್ ಅವರನ್ನು ಗಂಗುಲಮ್ಮ ಭೇಟಿಯಾದ ವಿಚಾರವನ್ನು, ಹಳೆಯ ನೆನಪುಗಳನ್ನು ರಮೇಶ್ ಕುಮಾರ್ ಅಭಿಮಾನಿಗಳು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.