ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಟರ್‌ ಹಾಲಿಗೆ ₹1 ಹೆಚ್ಚುವರಿ ನೀಡಲು ಆಗ್ರಹ

Last Updated 18 ಮೇ 2021, 3:52 IST
ಅಕ್ಷರ ಗಾತ್ರ

ಬೇತಮಂಗಲ: ‘ದೇಶದಲ್ಲಿ ಕೊರೊನಾ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹಾಲು ಉತ್ಪಾದಕ ರೈತರ ಹಾಲಿಗೆ ಪ್ರತಿ ಲೀಟರ್‌ಗೆ ₹1 ಹೆಚ್ಚುವರಿಯಾಗಿ ನೀಡಿದರೆ ಸ್ವಲ್ಪಮಟ್ಟಿಗೆ ಸಹಾಯ ಆಗುತ್ತದೆ’ ಎಂದು ಕೋಚಿಮುಲ್ ಬಂಗಾರಪೇಟೆ-ಕೆ.ಜಿ.ಎಫ್ ತಾಲ್ಲೂಕು ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.

ಗ್ರಾಮದ ಸಮೀಪದ ದೊಡ್ಡಕಾರಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ 2ನೇ ಅಲೆಯಿಂದ ತತ್ತರಿಸಿ ಹೋಗಿರುವ ಕೋಲಾರ-ಚಿಕ್ಕಬಳ್ಳಾಪುರಅವಳಿ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟದ ವತಿಯಿಂದ ಅಕ್ಕಿ ವಿತರಣೆಗೆ ಸಂಬಂಧಪಟ್ಟಂತೆ ಅಧ್ಯಕ್ಷ ವೈ.ನಂಜೇಗೌಡ ಮತ್ತು ಆಡಳಿತ ಮಂಡಳಿಯಮಧ್ಯೆ ಗೊಂದಲ ಉಂಟಾಗಿರುವಹಿನ್ನೆಲೆಯಲ್ಲಿ ಅವರು ತಮ್ಮ ಅನಿಸಿಕೆಯನ್ನು ಹೊರ ಹಾಕಿದರು.

‘ಅಕ್ಕಿ ಮತ್ತು ಮಾಸ್ಕ್ ಕಿಟ್ ನೀಡುವುದಕ್ಕೆ ಸಂಬಂಧಪಟ್ಟಂತೆ ಅಧ್ಯಕ್ಷರು ಆಡಳಿತ ಮಂಡಳಿ ಯಾವುದೇ ಪೂರ್ವಭಾವಿ ಸಭೆ ನಡೆಸಿ ನಮ್ಮ ಅಭಿಪ್ರಾಯ ಪಡೆದಿಲ್ಲ. ಈ ಬಗ್ಗೆ ಅಧ್ಯಕ್ಷರು ನೀಡಿರುವ ಹೇಳಿಕೆ ಅವರ ವೈಯಕ್ತಿಕವಾಗಿರುತ್ತದೆ. ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ಸಭೆ ಕರೆದರೆ ಅಕ್ಕಿ ವಿತರಣೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತೇನೆ’ ಎಂದು ತಿಳಿಸಿದರು.

‘ಹಾಲು ಉತ್ಪಾದನೆ ಮಾಡುವ ರೈತರ ದುಡಿಮೆಯಿಂದ ನಮ್ಮ ಸಂಸ್ಥೆ ನಡೆಯುತ್ತಿದೆ ಅವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಅಕ್ಕಿ ನೀಡಿದರೆ ₹1 ಲೀಟರ್ ಹಾಕುವ ರೈತ ಮತ್ತು ₹50 ಲೀಟರ್ ಹಾಲು ಹಾಕುವ ರೈತರಿಗೂ ಒಂದೇ ರೀತಿಯ ಪರಿಹಾರ ನೀಡಿದಂತಾಗುತ್ತದೆ. ಉತ್ಪಾದಕರ ಖಾತೆಗೆ ಜಮಾ ಮಾಡಿದರೆ ಹೆಚ್ಚುವರಿ ಹಣವೂ ನೇರವಾಗಿ ಉತ್ಪಾದಕರ ಕೈ ಸೇರುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಎರಡು ತಿಂಗಳ ಕಾಲ ನೀಡಿದರೆ ಹೆಚ್ಚುವರಿಯಾಗಿ ₹6 ಕೋಟಿ ಸಂಸ್ಥೆಗೆ ಹೊರೆಯಾಗುತ್ತದೆ. ಆದರೆ ಅಕ್ಕಿಯನ್ನು ನೀಡಿದರೂ ಹೆಚ್ಚು ಕಡಿಮೆ ಅದೇ ಲೆಕ್ಕಕ್ಕೆ ಬರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT