ಗುರುವಾರ , ಮೇ 13, 2021
39 °C

ನೆರೆ ರಾಜ್ಯದವರಿಗೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಆಂಧ್ರಪ್ರದೇಶದಿಂದ ಅನಗತ್ಯವಾಗಿ ಪ್ರವೇಶ ಮಾಡುವುದನ್ನು ತಡೆಯಲು ಹೆಬ್ಬಣಿ, ನಂಗಲಿ ಗ್ರಾಮಗಳ ಬಳಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು ಆ ಕಡೆಯಿಂದ ಬರುವವರ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ ಎಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ತಿಳಿಸಿದರು.

ತಾಲ್ಲೂಕಿನ ತಿಮ್ಮರಾವುತನಹಳ್ಳಿ ಗ್ರಾಮದ ಚೆಕ್‌ಪೋಸ್ಟ್‌ಗೆ ಮಂಗಳವಾರ ಸಂಜೆ ಭೇಟಿ ನೀಡಿದ ಅವರು, ತಾಯಲೂರು, ಗೂಕುಂಟಿ ಗ್ರಾಮಗಳ ಬಳಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಬೇಕಿತ್ತು. ಆದರೆ ಬುಧವಾರದಿಂದ ನೆರೆಯ ಆಂಧ್ರಪ್ರದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ಬರಲಿದ್ದು, ಅವರೇ ಇಲ್ಲಿಂದ ಹೋಗುವವರ ಮೇಲೆ ಹಾಗೂ ಅಲ್ಲಿಂದ ಬರುವವರ ಮೇಲೆ ನಿರ್ಬಂಧ ಹೇರಲಿದ್ದಾರೆ ಎಂದರು.

ತಾಲ್ಲೂಕು ಸರ್ವೆ ಅಧಿಕಾರಿ ಪುಟ್ಟಸ್ವಾಮಿ, ಕಂದಾಯ ನಿರೀಕ್ಷಕ ಸಿ.ಸುಬ್ರಮಣ್ಯಂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.