ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಚ ಪಡೆಯುತ್ತಿದ್ದ ಕಂದಾಯ ಸಿಬ್ಬಂದಿ ಬಂಧನ

Published 6 ಜುಲೈ 2024, 20:26 IST
Last Updated 6 ಜುಲೈ 2024, 20:26 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಭೂ ಪರಿವರ್ತನೆ ಮಾಡಿಕೊಡಲು ₹20 ಸಾವಿರ ಲಂಚ ಪಡೆಯುತ್ತಿದ್ದ ಕಂದಾಯ ಮತ್ತು ಸರ್ವೆ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 

ದೊಡ್ಡ ಕಡತೂರು ಗ್ರಾಮದ ಕಾಮಣ್ಣ ಎಂಬುವರ ಜಮೀನಿನ ನಕಾಶೆ ಮತ್ತು ಭೂ ಪರಿವರ್ತನೆಗಾಗಿ ಕಂದಾಯ ಇಲಾಖೆಯ ಆರ್‌ಐ ಮಂಜುನಾಥ್ ಮತ್ತು ಸರ್ವೆ ಇಲಾಖೆ ಎಡಿಎಲ್ಆರ್ ಅಶ್ವಿನಿ ಎಂಬುವವರು ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 

ಮಂಜುನಾಥ್ ಶನಿವಾರ ಬೆಳಗ್ಗೆ ₹10 ಸಾವಿರ ಪಡೆದು ಇನ್ನುಳಿದ ಹಣವನ್ನು ಅಟೆಂಡರ್‌ಗೆ ನೀಡುವಂತೆ ತಿಳಿಸಿದ್ದಾರೆ. ಅಟೆಂಡರ್‌ನಿಂದ  ಮಂಜುನಾಥ್‌ ಹಣ ಪಡೆಯುವಾಗ ಲೋಕಾಯುಕ್ತ ಎಸ್‌.ಪಿ.ಉಮೇಶ್‌ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬಂಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT