ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಣೆ

Published 9 ಜೂನ್ 2024, 7:29 IST
Last Updated 9 ಜೂನ್ 2024, 7:29 IST
ಅಕ್ಷರ ಗಾತ್ರ

ಬಂಗಾರಪೇಟೆ: ಆಧುನಿಕ ತಂತ್ರಜ್ಞಾನ ಬಳಕೆ ಕೃಷಿ ಕ್ಷೇತ್ರಕ್ಕೂ ಹೊರತಾಗಿಲ್ಲ. ಈಚೆಗಷ್ಟೇ ಕೃಷಿ ವಿಜ್ಞಾನಿಗಳು ತಾಲ್ಲೂಕಿನಲ್ಲಿ ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಿಸುವ ಕುರಿತು ರೈತರಿಗೆ ತರಬೇತಿ ನೀಡಿದ್ದರು.

ಹಾಗಾಗಿ, ತಾಲ್ಲೂಕಿನಲ್ಲಿ ಕೆಲ ರೈತರು ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಿಸುವ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ. ನುರಿತ ಕಾರ್ಮಿಕರನ್ನು ಬೇಡುವ ಕೃಷಿ ಕೆಲಸಗಳನ್ನು ಡ್ರೋನ್ ಸುಲಭವಾಗಿ ಮಾಡುತ್ತದೆ.  ಕಾರ್ಮಿಕರಿಗೆ ಕಾದು ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡಬೇಕಿತ್ತು. ಆದರೆ, ಡ್ರೋನ್ ಮೂಲಕ ಈ ಸಮಸ್ಯೆ  ನೀಗಿದಂತಾಗಿದೆ. 

ಕಾರ್ಮಿಕರ ಸಮಸ್ಯೆಯಷ್ಟೇ ಅಲ್ಲ, ಆರ್ಥಿಕ ಪರಿಸ್ಥಿತಿ ನಿರ್ವಹಣೆ ಹಾಗೂ ಸಮಯ ಉಳಿತಾಯದ ದೃಷ್ಟಿಯಿಂದ ಡ್ರೋನ್ ತಂತ್ರಜ್ಞಾನ ರೈತರಿಗೆ ವರವಾಗಿ ಪರಿಣಮಿಸಿದೆ.

ತಾಲ್ಲೂಕಿನ ತಿಮ್ಮಾಪುರ ಗ್ರಾಮದ ರೈತ ಕೃಷ್ಣಮೂರ್ತಿ ಅವರು ಡ್ರೋನ್ ತಂತ್ರಜ್ಞಾನದ ಬಳಕೆ ಮುಂದಾಗಿದ್ದಾರೆ.

ಒಂದು ಎಕರೆ ಬೆಳೆ ಬೆಳೆಯುವ ರೈತರು ಬೆಳೆಗಳಿಗೆ ಔಷಧಿಯನ್ನು ಸಿಂಪಡಿಸಲೇಬೇಕು. ಬೆಳೆಗೆ ಅಂಟಿಕೊಂಡಿರುವ ಹುಳುಗಳಿಂದ ಬೆಳೆಗಳನ್ನು ರಕ್ಷಿಸಲು ಔಷಧಿ ಬಳಕೆ ಅನಿವಾರ್ಯ. ಈ ವೇಳೇ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಒಂದು ಎಕರೆ ಪ್ರದೇಶದಲ್ಲಿರುವ ಬೆಳೆಗಳಿಗೆ ಔಷಧಿ ಹೊಡೆಬೇಕು ಎಂದರೆ ಕಾರ್ಮಿಕರಿಗೆ ಕನಿಷ್ಠ ಒಂದು ದಿನದ ಕೂಲಿ ನೀಡೇಕು. ಕನಿಷ್ಠ ಅಂದರೂ ಇಬ್ಬರು ಕೂಲಿ ಕಾರ್ಮಿಕರು ಬೇಕಾಗುತ್ತದೆ.  ಅಂದಾಜಿನ ಪ್ರಕಾರ ಒಂದು ಎಕರೆ ಜಮೀನಿಗೆ ಔಷಧಿ ಹೊಡೆಯಲು ಇಬ್. ಇದಕ್ಕೆ ಹೆಚ್ಚು ಖರ್ಚು ತಗಲುತ್ತದೆ.

ಆದರೆ, ಅದೇ ಡ್ರೋನ್ ಮೂಲಕ ಒಂದು ಎಕರೆ ಬೆಳೆಗಳಿಗೆ ಔಷಧಿಯನ್ನು ಸಿಂಪಡಿಸಬೇಕಾದರೆ ಸುಮಾರು 20 ಲೀ ಔಷಧಿ ಸಾಕು. ಸಮಯವೂ ಕಡಿಮೆ. ಅಂದರೆ  15 ರಿಂದ 20 ನಿಮಿಷದಲ್ಲಿ ಒಂದು ಎಕರೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಬಹುದು. ಹಣ, ಸಮಯ ಉಳಿತಾಯದ ಜತೆಗೆ ಕೃಷಿ ಕಾರ್ಮಿಕರ ವೆಚ್ಚವನ್ನೂ ಉಳಿಸಬಹುದು ಎನ್ನುತ್ತಾರೆ ಕೃಷ್ಣಮೂರ್ತಿ.

 ಮೂರು ಎಕರೆ ಪೈಕಿ ಎರಡು ಎಕರೆ ಎಲೆ ಕೋಸು ಮತ್ತು ಒಂದು ಎಕರೆ ಗಡ್ಡೆ ಕೋಸು ಬೆಳೆದಿದ್ದೇನೆ. ಮೂರು ಎಕರೆಗೂ   ಡ್ರೋನ್ ಮೂಲಕ ಔಷಧಿ ಸಿಂಪಡಿಸಲಾಗಿದೆ. ಬೆಂಗಳೂರಿನ ಪಿಐ ಸಂಸ್ಥೆ ಮೂಲಕ ಡ್ರೋನ್ ಮೂಲಕ ಔಷಧಿಯನ್ನು ಸಿಂಪಡಿಸಲು ಒಂದು ಎಕರೆಗೆ ₹ 350  ಮಾತ್ರ ವೆಚ್ಚವಾಗಿದೆ ಎಂದು. ಡ್ರೋನ್ ಬಳಕೆ ರೈತರಿಗೆ ವರದಾನವಾಗಿದ ಎನ್ನುತ್ತಾರೆ ಅವರು.

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಖರ್ಚನ್ನು ಕಡಿಮೆ ಮಾಡಬಹುದು. ಕೃಷಿ ಕಾರ್ಮಿಕರ ಮೇಲಿನ ಅವಲಂಬನೆ ತಪ್ಪಿಸಬಹುದು.
ಪ್ರತಿಭಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ, ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT