ಟೊಮೆಟೊಗೆ ಉತ್ತಮ ಬೆಲೆ ಸಿಗಬಹುದು ಎಂದು 30 ಸಾವಿರ ಸಸಿಗಳನ್ನು ನಾಟಿ ಮಾಡಲಾಗಿದ್ದು ಫಸಲು ಸಮೃದ್ಧವಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದ ಕಾರಣ ಕೀಳದೆ ತೋಟದಲ್ಲೇ ಬಿಟ್ಟುಬಿಡಲಾಗಿದೆ. ಇದರಿಂದ ಸುಮಾರು ₹7 ಲಕ್ಷ ಸಾಲದ ಹೊರೆ ಬಿದ್ದಿದೆ.
ಹೇಮಂತ್ ಎನ್.ವಡ್ಡಹಳ್ಳಿ, ರೈತ
ಕಳೆದ ವರ್ಷಗಳಲ್ಲಿ ಈ ಅವಧಿಯಲ್ಲಿ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿತ್ತು. ಅದನ್ನೇ ನಂಬಿ ಈ ಸಲವೂ ರೈತರು ಟೊಮೆಟೊ ಬೆಳೆದಿದ್ದಾರೆ. ಆದರೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಸರ್ಕಾರ ಟೊಮೆಟೊಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರನ್ನು ಉಳಿಸಬೇಕು.
ಎನ್.ಆರ್.ಎಸ್.ಸತ್ಯಣ್ಣ, ಟೊಮೆಟೊ ಮಂಡಿ ಮಾಲಿಕರು
ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿದ ಕಾರಣ ಮುಳಬಾಗಿಲು ತಾಲ್ಲೂಕಿನ ಪೆರಮಾಕನಹಳ್ಳಿ ಬಳಿ ತೋಟದಲ್ಲೇ ಕೊಳೆಯುತ್ತಿರುವ ಟೊಮೆಟೊ