ಕೋಲಾರ: ಹೊಸ ವರ್ಷದಲ್ಲಿ ಮತ್ತೆ ‘ಕೆಂಪು ಸುಂದರಿ’ಗೆ ಬೇಡಿಕೆ ಸೃಷ್ಟಿಯಾಗಿದ್ದು, ಟೊಮೆಟೊ ಧಾರಣೆ ಏರುಗತಿಯಲ್ಲಿ ಸಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ 15 ಕೆ.ಜಿ. ತೂಕದ ಬಾಕ್ಸ್ ಟೊಮೆಟೊ ₹ 850 ರವರೆಗೆ ಮಾರಾಟವಾಗುತ್ತಿದೆ. ಹರಾಜಿನಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ದರ ಇನ್ನೂ ಹೆಚ್ಚಿದೆ. ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲೂ ಕೆ.ಜಿಗೆ ₹ 60 ದರದಲ್ಲಿ ಮಾರಾಟವಾಗುತ್ತಿದೆ.

ಈ ಮೂಲಕ ನೂತನ ವರ್ಷ ಟೊಮೆಟೊ ಬೆಳೆಗಾರರು ಹಾಗೂ ವರ್ತಕರ ಮೊಗದಲ್ಲಿ ಹರ್ಷ ಮೂಡಿಸಿದೆ. ಇತ್ತೀಚಿನ ತಿಂಗಳಲ್ಲಿ ಒಂದು ಕ್ರೇಟ್ ₹ 850ಕ್ಕೆ ಮಾರಾಟವಾಗಿರುವುದು ಇದೇ ಮೊದಲು.

ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಪ್ರಮಾಣ 8 ಸಾವಿರ ಕ್ವಿಂಟಲ್ (ಸುಮಾರು 8 ಸಾವಿರ ಬಾಕ್ಸ್) ಇತ್ತು.

ಪ್ರಮುಖವಾಗಿ ತಮಿಳುನಾಡಿನಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಲ್ಲಿಂದ ವರ್ತಕರು ಬಂದು ಲಾರಿಯಲ್ಲಿ ಟೊಮೆಟೊ ಕೊಂಡೊಯ್ಯುತ್ತಿದ್ದಾರೆ. ಒಡಿಶಾ, ಜಾರ್ಖಂಡ, ಪಶ್ಚಿಮ ಬಂಗಾಳ, ಬಿಹಾರದಿಂದಲೂ ಹೆಚ್ಚಿನ ಬೇಡಿಕೆ ಬರುತ್ತಿದೆ.

ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಗೆ ಇದೇ ಜಿಲ್ಲೆಯಿಂದ ಟೊಮೆಟೊ ಪೂರೈಕೆ ಕಡಿಮೆ ಆಗಿದೆ. ಆದರೆ, ಚಿತ್ರದುರ್ಗದ ಚಳ್ಳಕೆರೆ, ತುಮಕೂರು, ಚಿಕ್ಕಬಳ್ಳಾಪುರ, ಆಂಧ್ರದ ಕೆಲ ಭಾಗಗಳಿಂದ ಶೇ 90ರಷ್ಟು ಟೊಮೆಟೊ ಆವಕವಾಗುತ್ತಿದೆ. ಶೇ 10ರಷ್ಟು ಮಾತ್ರ ಕೋಲಾರ ಜಿಲ್ಲೆಯಿಂದ ಬರುತ್ತಿದೆ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ವರ್ಷದಲ್ಲಿ ‘ಕೆಂಪು ಸುಂದರಿ’ಯು ರೈತರಿಗೆ ಲಾಭ ತಂದುಕೊಡುವ ಲಕ್ಷಣ ಮತ್ತೆ ಕಾಣಿಸುತ್ತಿದೆ. ಈಗಿನ ಧಾರಣೆ ಮುಂದುವರಿದರೆ ಲಾಭ ಗಿಟ್ಟಲಿದೆ ಎಂದು ಟೊಮೆಟೊ ಬೆಳೆಗಾರರು ತಿಳಿಸಿದ್ದಾರೆ.

ಟೊಮೆಟೊ ಧಾರಣೆ ಮತ್ತೆ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ಟೊಮೆಟೊ ಫಸಲು ಕಡಿಮೆ ಇದ್ದರೂ ಹೊರ ಜಿಲ್ಲೆಗಳಿಂದ ಬರುತ್ತಿದ್ದು ವಹಿವಾಟು ಚೆನ್ನಾಗಿ ನಡೆಯುತ್ತಿದೆ.
– ಕಿರಣ್, ಎಪಿಎಂಸಿ ಕಾರ್ಯದರ್ಶಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.