ಮಹಿಳೆಯರು ನಿಂದಿಸಿದರು: ಅಧಿಕಾರಿ ಬೇಸರ
‘ಶುಕ್ರವಾರ ಬೆಳಿಗ್ಗೆ 9.30ರ ಸಮಯದಲ್ಲಿ ಹಿರಣ್ಯ ಗೌಡನಹಳ್ಳಿಗೆ ಹೋಗಿ ಎಂಟು ಸಂಘಗಳು ಪಡೆದಿದ್ದ ಸಾಲದ ಕಂತನ್ನು ಪಾವತಿಸುವಂತೆ ಕೋರಿದೆ. ಆಗ ಮಹಿಳೆಯರು ಕೆಟ್ಟದಾಗಿ ನನ್ನನ್ನು ನಿಂದಿಸಿ, ಹಗ್ಗ ತಂದು ಕಟ್ಟಿ ಹಾಕಲು ಯತ್ನಿಸಿದರು. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರೂ ಕೇಳಲಿಲ್ಲ. ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದೇನೆ’ ಎಂದು ವ್ಯವಸಾಯ ಸಹಕಾರಿ ಸೇವಾ ಸಂಘದ ಕಾರ್ಯದರ್ಶಿ ನಾಗರಾಜ್ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಪ್ರತಿಕ್ರಿಯಿಸಿ, ‘ಬಡ್ಡಿ ರಹಿತ ಹಾಗೂ ಆಧಾರ ಸಾಲ ನೀಡಲಾಗಿದೆ. ಸಾಲಮನ್ನಾ ಸಂಬಂಧ ಸರ್ಕಾರದಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ, ಎಲ್ಲಾ ಸಂಘಗಳು ಸಾಲ ಪಾವತಿಸಲೇ ಬೇಕು. ಸರ್ಕಾರಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಪತ್ರ ಬರೆದು ಮಾಹಿತಿ ತರಿಸಿಕೊಳ್ಳುತ್ತೇವೆ’ ಎಂದರು.