ಮುಳಬಾಗಲು: ಹಲ ವರ್ಷಗಳ ಹಿಂದೆಯೇ ಪಟ್ಟಣದ ವಿವೇಕಾನಂದ ನಗರದಲ್ಲಿ ವಾಸಿಸುತ್ತಿರುವ ದಲಿತರಿಗೆ ಪುರಸಭೆ ಹಕ್ಕುಪತ್ರಗಳನ್ನು ನೀಡಿದ್ದರೂ; ಕೆಲವರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಗುಡಿಸಲುಗಳನ್ನು ನೆಲಸಮ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಡಿಎಸ್ಎಸ್, ರೈತ ಹಕ್ಕು ಹೋರಾಟ ಸಮಿತಿ ಪುರಸಭೆ ಕಚೇರಿ ಮುಂದೆ ಶುಕ್ರವಾರವೂ ಧರಣಿ ಮುಂದುವರೆಸಿತು.

ಧರಣಿ ನಿರತರಿಗೆ ರಾಜ್ಯ ಕಿಸಾನ್ಸಭಾ, ರಾಜ್ಯ ರೈತಸಂಘ, ಹಸಿರು ಸೇನೆ ಕಾರ್ಯಕರ್ತರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಪುರಸಭೆ ಆಡಳಿತ ಕಾನೂನು ರೀತಿಯಲ್ಲಿ ಹಕ್ಕುಪತ್ರ ನೀಡಿದ್ದು, ಅದರಂತೆ ಆಗಿನಿಂದಲೂ ಗುಡಿಸಲು ಹಾಕಿಕೊಂಡು ವಾಸವಾಗಿದ್ದೇವೆ.

ಏನೇ ಆಗಲಿ ಇಲ್ಲಿಂದ ನಾವು ಕಾಲ್ತೆಗೆಯಲ್ಲ. ಸದರಿ ನಿವೇಶನಗಳಿಗೆ ಕಾನೂನಿನಂತೆ ವಾಸವಾಗಿರುವವರಿಗೆ ಅವರವರ ಹೆಸರಿನಲ್ಲಿ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ನಂತರ ಗುಡಿಸಲು ವಾಸಿಗಳು ಮೆರವಣಿಗೆ ನಡೆಸಿ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.ತಹಶೀಲ್ದಾರ್ ಎಚ್.ನಂಜಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ತಕ್ಷಣ ಪುರಸಭೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲು ಒತ್ತಾಯಿಸಿದರು.

ಧರಣಿಯಲ್ಲಿ ರಾಜ್ಯ ಕಿಸಾನ್ಸಭೆ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್, ದಲಿತ ಸಂಘರ್ಷ ಸಮಿತಿ ಮುಖಂಡರಾದ ಕೀಲುಹೊಳಲಿ ಸತೀಶ್, ಸಂಗಸಂದ್ರ ವಿಜಯಕುಮಾರ್, ವರದಗಾನಹಳ್ಳಿ ಮುನಿವೆಂಕಟಪ್ಪ, ಕಸವುಗಾನಹಳ್ಳಿ ರಾಜು, ರೈತ ಹೋರಾಟ ಸಮಿತಿ ಅಧ್ಯಕ್ಷ ಮೆಕಾನಿಕ್ ಶ್ರೀನಿವಾಸ್, ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಂ.ಎನ್.ಚೆನ್ನಕೇಶವಗೌಡ, ಅಬ್ಬಣಿ ಶಿವಣ್ಣ, ಜೆಡಿಎಸ್ ಮುಖಂಡರಾದ ತಾಯಲೂರು ಶೇಖರ್, ಡಿ.ಸೋಮಣ್ಣ ಮುಂತಾದವರು ಭಾಗವಹಿಸಿದ್ದರು.

ಶ್ರೀನಿವಾಸ ಕಲ್ಯಾಣೋತ್ಸವ
ಮುಳಬಾಗಲು: ಲೋಕ ಕಲ್ಯಾಣೋತ್ಸವದ ಅಂಗವಾಗಿ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ಟಿಟಿಡಿ ವತಿಯಿಂದ ಶ್ರೀನಿವಾಸ ಕಲ್ಯಾಣ್ಯೋತ್ಸವ ಶುಕ್ರವಾರ ವೈಭವದಿಂದ ನಡೆಯಿತು.ಬೆಂಗಳೂರಿನ ರಘುನಾಥಾಚಾರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಮಾಂಗಲ್ಯ ಧಾರಣೆ ಮಧ್ಯಾಹ್ನ 12.30ಕ್ಕೆ ನೆರವೇರಿತು.

ವಿಧಾನ ಪರಿಷತ್ ಸದಸ್ಯೆ ಎಸ್.ಆರ್.ಲೀಲಾ, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಕ್ಷ್ಮಯ್ಯ, ಓಂಶಕ್ತಿ ಚಲಪತಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಪ್ರಸಾದ್, ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಮು.ಕೃ.ಪದ್ಮನಾಭರಾವ್, ಪಿಡಬ್ಲ್ಯೂಡಿ ಕೃಷ್ಣಮೂರ್ತಿ, ಗಣೇಶ್, ಬಲ್ಲಂ ಭೀಮಣ್ಣ, ದೊಡ್ಡಚೌಡಪ್ಪ, ಶುಕ್ಲಯರ್ಜುವೇದ ಮಹಾಸಭೆ ಅಧ್ಯಕ್ಷ ಅನಂತ ಪದ್ಮನಾಭರಾವ್, ಕಾರ್ಯದರ್ಶಿ ಎಂ.ಗೋಪಾಲ್ ಇತರರು ಸ್ವಾಮಿ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.