ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯ: ನೀರು ಹರಿವಿನ ರಭಸಕ್ಕೆ ಕಾಣದ ಗೇಟ್‌

Published : 10 ಆಗಸ್ಟ್ 2024, 21:27 IST
Last Updated : 10 ಆಗಸ್ಟ್ 2024, 21:27 IST
ಫಾಲೋ ಮಾಡಿ
Comments

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್‌ ಸಂಖ್ಯೆ 19ರಲ್ಲಿ ಚೈನ್‌ ಲಿಂಕ್‌ ತುಂಡಾಗಿರುವ ಕಾರಣ ನೀರಿನ ಹೊರಹರಿವು ರಭಸವಾಗಿದೆ. ಈ ರಭಸಕ್ಕೆ ತುಂಡಾಗಿ ಬಿದ್ದಿರುವ ಭಾಗವೂ ಕಾಣತ್ತಿಲ್ಲ.

ಈ ಕುರಿತು ಸಾರ್ವಜನಿಕ ಸಂದೇಶ ರವಾನಿಸಿರುವ ತುಂಗಭದ್ರಾ ಮಂಡಳಿಯ ಅಧಿಕಾರಿಗಳು 19ನೇ ಗೇಟ್‌ನ ಚೈನ್‌ ಲಿಂಕ್‌ ತುಂಡಾಗಿದ್ದು, ಈ ಗೇಟ್‌ನಿಂದಲೇ ಅಂದಾಜು 35 ಸಾವಿರದಿಂದ 40 ಸಾವಿರ ಕ್ಯುಸೆಕ್‌ ನೀರು ಹೊರಗೆ ಹೋಗುತ್ತಿದೆ. ಉಳಿದ ಗೇಟ್‌ಗಳಿಂದ 75 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ. ಆದ್ದರಿಂದ ನದಿಪಾತ್ರದ ಜನರ ಎಚ್ಚರಿಕೆಯಿಂದ ಇರಬೇಕು. ಜನ ಸುರಕ್ಷತೆ ಪ್ರದೇಶಕ್ಕೆ ತೆರಳಬೇಕು’ ಎಂದು ಹೇಳಿದ್ದಾರೆ.

ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಬೆಂಗಳೂರಿನಿಂದ ಹೊರಟಿದ್ದು, ನೀರಿನ ಹೊರಹರಿವಿನ ಪ್ರಮಾಣವನ್ನು 1ರಿಂದ 2 ಲಕ್ಷ ಕ್ಯುಸೆಕ್‌ಗೆ ಏರಿಸಬೇಕು. ನೀರು ಕಡಿಮೆಯಾದ ಬಳಿಕವಷ್ಟೇ ತುಂಡಾದ ಚೈನ್‌ ಲಿಂಕ್‌ ಸರಿಪಡಿಸಲು ಸಾಧ್ಯವಾಗುತ್ತದೆ. ದುರಸ್ತಿಗೆ ಅಗತ್ಯವಾಗಿ ಬೇಕಾದ ನೀರು ಕಡಿಮೆಯಾಗಲು ಕನಿಷ್ಠ ಮೂರ್ನಾಲ್ಕು ದಿನವಾದರೂ ಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು. 105.788 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದ ಸಂಪೂರ್ಣ ಭರ್ತಿಯಾಗಿದೆ.

ಎರಡನೇ ಬಾರಿಗೆ ಘಟನೆ: ಹಿಂದಿನ ಐದು ವರ್ಷಗಳ ಅವಧಿಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿ.

2019ರಲ್ಲೂ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಏಕಾಏಕಿ‌ ತುಂಡಾಗಿ ಅಪಾರ ಪ್ರಮಾಣದ ನೀರು ಕಾಲುವೆಗೆ ಹರಿದು ಮುನಿರಾಬಾದ್ ಗ್ರಾಮಕ್ಕೂ ನೀರು ನುಗ್ಗಿತ್ತು. ಈ ಬಾರಿಯೂ ಇಂಥದ್ದೇ ಸಮಸ್ಯೆ ತಲೆದೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT