ಮಂಗಳವಾರ ಸಂಜೆ ತನ್ನ ಸ್ನೇಹಿತರ ಜತೆಗೆ ಈಜಲು ಕೆರೆಗೆ ತೆರಳಿದ್ದ ಬಾಲಕ ಫಕೀರಗೌಡ ನೀರಿಗೆ ಸುರುಳಿಯಾಕಾರದಲ್ಲಿ ಹಾರಿದ್ದಾನೆ. ನೀರಿಗೆ ಹಾರಿದ ಫಕೀರಗೌಡ ಮೇಲೆ ಏಳಲಿಲ್ಲ. ಇದನ್ನು ನೋಡಿದ ಕೆರೆಯ ದಡದಲ್ಲಿದ್ದ ಸ್ನೇಹಿತರು ತಕ್ಷಣ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಶಿಕ್ಷಕರು ವಿದ್ಯಾರ್ಥಿಯನ್ನು ಕೆರೆಯ ನೀರಿನಲ್ಲಿ ಹುಡುಕಾಟ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.