ಕುಷ್ಟಗಿ: ರಾಜ್ಯ ಹೆದ್ದಾರಿಯ ಅಕ್ಕಪಕ್ಕದ ನೀಲಗಿರಿ ನೆಡುತೋಪಿನ ಬುಡದಲ್ಲಿಯೇ ಸಸಿಗಳನ್ನು ನಾಟಿ ಮಾಡಿರುವ ಸಾಮಾಜಿಕ ಅರಣ್ಯ ಇಲಾಖೆ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಪಟ್ಟಣದ ಕೊಪ್ಪಳ, ಗಜೇಂದ್ರಗಡ ವಿವಿಧ ರಾಜ್ಯ ಹೆದ್ದಾರಿಗಳ ಎರಡೂ ಬದಿಯಲ್ಲಿ ಒಟ್ಟು 21 ಕಿಮೀವರೆಗೆ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅವಳಿ, ಬೇವು, ಬಸರಿ, ಬಸವನಪಾದ, ರೋಜಿಯಾ ಸಸಿಗಳನ್ನು ನೆಡಲು ಸಾಮಾಜಿಕ ವಲಯ ಅರಣ್ಯ ಇಲಾಖೆ ಉದ್ದೇಶಿಸಿದೆ. ಕೊಪ್ಪಳ ರಸ್ತೆಯಲ್ಲಿ ಪಟ್ಟಣದಿಂದ ನೆರೆಬೆಂಚಿ ಕ್ರಾಸ್ವರೆಗೆ ಜೆಸಿಬಿ ಯಂತ್ರದಿಂದ ಗುಂಡಿಗಳನ್ನು ತೋಡಲಾಗಿದ್ದು, ನೀಲಗಿರಿ ಗಿಡಗಳ ಪೊದೆಗಳಿರುವ ಜಾಗವನ್ನೇ ಸಸಿ ನಾಟಿಗೆ ಆಯ್ಕೆ ಮಾಡಿಕೊಂಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ನೀಲಗಿರಿ ಗಿಡ ಬೆಳೆಸುವುದನ್ನು ಎರಡು ದಶಕದ ಹಿಂದೆಯೇ ನಿಷೇಧಿಸಲಾಗಿದೆ ಎಂದು ಸ್ವತಃ ಅರಣ್ಯ ಇಲಾಖೆ ಮೂಲಗಳೇ ತಿಳಿಸಿವೆ.

ಜನರ ಆಕ್ಷೇಪ: ನೀಲಗಿರಿ ಸಸ್ಯ ಹೆಚ್ಚಿನ ಪೋಷಕಾಂಶ ಮತ್ತು ತೇವಾಂಶವನ್ನು ಹೀರಿಕೊಂಡು ಬೆಳೆಯುತ್ತದೆ. ಈ ಗಿಡಗಳ ಕೆಳಗೆ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ. ಗಿಡಗಳ ಅಕ್ಕಪಕ್ಕದ ಜಮೀನುಗಳಲ್ಲಿ ಸುಮಾರು 30 ಅಡಿ ಉದ್ದ ಅಗಲದಲ್ಲಿ ಯಾವ ಬೆಳೆಯೂ ಬೆಳೆಯುವುದಿಲ್ಲ. ನೀಲಗಿರಿ ಗಿಡಗಳು ಅಂತರ್ಜಲ ಹೆಚ್ಚಳಕ್ಕೂ ಅಡ್ಡಿಯಾಗಿವೆ. ಹೀಗಿರುವಾಗ ಈ ಗಿಡಗಳ ಮಧ್ಯದಲ್ಲಿಯೇ ಸಸಿ ನಾಟಿ ಮಾಡುತ್ತಿರುವ ಅರಣ್ಯ ಇಲಾಖೆ ಸಸಿ ನಾಟಿ ನೆಪದಲ್ಲಿ ಕಾಟಾಚಾರಕ್ಕೆ, ಅಷ್ಟೇ ಅಲ್ಲದೆ ಕೇವಲ ಸರ್ಕಾರದ ಹಣ ಖರ್ಚು ಮಾಡಲು ಇಂಥ ಪ್ರಯತ್ನ ನಡೆಸಿದೆ ಎಂದು ಸಾರ್ವಜನಿಕರಾದ ವೀರಭದ್ರಗೌಡ ಪಾಟೀಲ, ಕಳಕಪ್ಪ ಬೆಳವಣಕಿ ದೂರಿದರು.

ಈ ಕುರಿತು ವಿವರಿಸಿದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸತೀಶ ಲುಕ್ಕ, ‘ನೀಲಗಿರಿ ಗಿಡಗಳು ಪ್ರಾದೇಶಿಕ ವಲಯದ ವ್ಯಾಪ್ತಿಗೆ ಬರುತ್ತಿದ್ದು, ಅವುಗಳನ್ನು ತೆಗೆದುಹಾಕಲು ಅವರೇ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಶಿವರಾಜ ಮೇಟಿ, ‘ರಸ್ತೆ ಪಕ್ಕದ ನೀಲಗಿರಿ ಗಿಡಗಳನ್ನು ಈ ಹಿಂದೆಯೇ ಕಡಿಯಲಾಗಿತ್ತು, ಈಗ ಕುಳೆ ಬಂದಿವೆ, ರಾಜ್ಯದ ಇತರೆ ಕಡೆಗಳಲ್ಲಿಯೂ ಇದೇ ರೀತಿ ಗಿಡಗಳು ಇವೆ. ಅವುಗಳನ್ನು ಬೇರು ಸಹಿತ ಕಿತ್ತುಹಾಕಲು ಸರ್ಕಾರದಿಂದ ಯಾವುದೇ ಸುತ್ತೋಲೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ನೀಲಗಿರಿ ಗಿಡಗಳ ಸುತ್ತ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ ಹೆಚ್ಚು ತೇವಾಂಶ ಹೀರಿಕೊಳ್ಳುತ್ತಿರುವ ಗಿಡಗಳು, ಬೆಳೆಗಳಿಗೂ ಹಾನಿ ಬೇರು ಸಹಿತ ಗಿಡಗಳ ವಿಲೇವಾರಿಗೆ ರೈತರ ಒತ್ತಾಯ

ನೀಲಗಿರಿ ಗಿಡಗಳಿಂದ ಅಂತರ ಕಾಯ್ದುಕೊಂಡು ಗುಂಡಿ ತೋಡಿ ಸಸಿಗಳನ್ನು ನಾಟಿ ಮಾಡಲಾಗಿದೆ.
ಸತೀಶ್ ಲುಕ್ಕ ಆರ್ಎಫ್ಒ ಸಾಮಾಜಿಕ ಅರಣ್ಯ ಇಲಾಖೆ.

ರಸ್ತೆ ಬದಿಯ ನೀಲಗಿರಿ ಹಳೆಯ ಗಿಡಗಳನ್ನು ತೆಗೆದುಹಾಕಲು ಇಲಾಖೆ ಸೂಚನೆ ಬಂದಿಲ್ಲ ಸಾರ್ವಜನಿಕರಿಂದ ದೂರು ಬಂದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ
. ಶಿವರಾಜ ಮೇಟಿ ಆರ್ಎಫ್ಒ ಪ್ರಾದೇಶಿಕ ಅರಣ್ಯ ಇಲಾಖೆ.

ನೀಲಗಿರಿ ಗಿಡಗಳನ್ನು ಬೇರು ಸಮೇತ ಕಿತ್ತುಹಾಕಿ ಬೇರೆ ಸಸಿಗಳನ್ನು ನಾಟಿ ಮಾಡಿದರೆ ಉತ್ತಮ. ಈ ಬಗ್ಗೆ ಅರಣ್ಯ ಇಲಾಖೆಯವರು ಚಿಂತನೆ ನಡೆಸಬೇಕಿದೆ.
ಬಸಪ್ಪ ಕುರಿ ರೈತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.